ಶೀತಕ್ಕೆ ಶೀತಲವಾಗಿ,
ತೊಳಲಾಡುತ್ತಿರುವ ನನ್ನ,
ಉಸಿರಲ್ಲಿ ಬೆರೆತು
ನೀ ತರುವ ಆಹ್ಲಾದ,
ಹಣೆ-ಎದೆಯ ಮೇಲೆ,
ನೀ ನನ್ನ ನೇವರಿಸಿದಾಗ,
ಆಗುವ ಆ ಬೆಚ್ಚನೆಯ ಅನುಭವ,
ಶೀತದಲ್ಲೂ ಪ್ರಣಯ ಮೂಡಿಸಿದೆ
ಕೇಳೇ ನನ್ನ ಪ್ರೀತಿಯ "ವಿಕ್ಸ್ ವಿಪೋರಬ್ "
Sunday, September 17, 2017
Monday, August 7, 2017
ಚಂದಿರನ ಕನ್ನಡಿ
ಹಾಸಿಗೆ ದಿಂಬಿನಲಿ ಹೊರಳುತ್ತ
ನಿದ್ದೆಗೆ ಹೊರಟ್ಟಿದ್ದ ನನಗೆ,
ನಿದ್ದೆಗೆ ಹೊರಟ್ಟಿದ್ದ ನನಗೆ,
ಕೊಠಡಿಯ ತುಂಬೆಲ್ಲ
ಬೆಳದಿಂಗಳು ಚೆಲ್ಲಿದ್ದ
ತುಂಬು ಚಂದಿರ,
ಬೆಳದಿಂಗಳು ಚೆಲ್ಲಿದ್ದ
ತುಂಬು ಚಂದಿರ,
ಬಾಲ್ಯದಲ್ಲಿ,
ಅಜ್ಜಿ, ಅತ್ತೆ, ದೊಡ್ಡಪ್ಪ, ತಮ್ಮಂದಿರ ಜೊತೆ
ವಠಾರದ ಅಂಗಳದಲ್ಲಿ,
ಮಲಗಿದ್ದ ಸವಿನೆನಪುಗಳಿಗೆ
ಕನ್ನಡಿ ಹಿಡಿದಿದ್ದ.
ಅಜ್ಜಿ, ಅತ್ತೆ, ದೊಡ್ಡಪ್ಪ, ತಮ್ಮಂದಿರ ಜೊತೆ
ವಠಾರದ ಅಂಗಳದಲ್ಲಿ,
ಮಲಗಿದ್ದ ಸವಿನೆನಪುಗಳಿಗೆ
ಕನ್ನಡಿ ಹಿಡಿದಿದ್ದ.
Monday, July 31, 2017
ಕರಗಿ ಹೋದ ಐಸ್ ಕ್ರೀಮ್
ಸುಮಾರು ೩೦ ವರ್ಷದ ಹಿಂದಿನ ಘಟನಾ ಇದು. ಮನ್ಯಾಗ ನಾನು ಮತ್ತ ಗಂಗಮ್ಮತ್ಯಾ ಅಷ್ಟ ಇದ್ವಿ. ಅವರು ಒಳಗೆ ರಾಟಿ ತಿರುಗಿಸಿ ಬಟ್ಟೆ ಮಗ್ಗಾಗಳಿಗೆ ದಾರದ ಉಂಡೆ ಮಾಡ್ತಿದ್ರು. ನಾನು ಹೊರಗ ಅಂಗಳದಲ್ಲಿ ಆಡ್ತಿದ್ದೆ. ಅದೇ ವೇಳ್ಯಾಗ , ಆ ಭರಣಿ ಐಸ್ ಕ್ರೀಮ್ ನವ ನಮ್ಮಮನಿ ಮುಂದ ಹೊಂಟಿದ್ದ. ಅವನ್ನ ನೋಡಿದ್ದೇ ತಡ, ನಾ ಒಳಗೆ ಓಡಿ - 'ಗಂಗಮತ್ತ್ಯಾ, ನಂಗ ಐಸ್ ಕ್ರೀಮ್ ಬೇಕು' ಅಂದೇ. ಅವ್ರ ಹತ್ರ ದುಡ್ಡು ಇದ್ದಿಲ್ಲ. ಮನ್ಯಾಗ ಬೇರೆ ಯಾರು ಇಲ್ಲಾ! ಆದ್ರೆ ನಂಗೆ ಇವೆಲ್ಲ ಎಲ್ಲಿ ಗೊತ್ತಾಗ್ಬೇಕು!? ನಂಗ ಐಸ್ ಕ್ರೀಮ್ ಬೇಕಿತ್ತು ಅಷ್ಟ. ಸ್ವಲ್ಪ ನನ್ನ ರಮಿಸೋಕೆ ಪ್ರಯತ್ನ ಮಾಡಿದ್ರು, ನಾನು ನನ್ನ ಹಠ ಬಿಡಲಿಲ್ಲ. ಕೊನೆಗೆ ಅವ್ರು ಸಿಟ್ಟಿಗೆದ್ದು ಬೈದು, ಒಳಗ ಹೊರಟು ಹೋದ್ರು. ಆ ಐಸ್ ಕ್ರೀಮ್ ನವ ತನ್ನ ಗಾಡಿ ನೂಕಿಕೋತ ಮುಂದ್ ಹೋದ.
ಸ್ವಲ್ಪ ಹೊತ್ತ ಆದ ಮೇಲೆ, ಆ ಐಸ್ ಕ್ರೀಮ್ ನವ ನಮ್ಮ ಮನಿ ಮುಂದಿನಿಂದಲೇ ವಾಪಸ ಹೊಂಟಿದ್ದ. ನಾನು ಜಗಲಿ ಮ್ಯಾಲೆ ಅಳು ಮುಖ ಮಾಡ್ಕೊಂಡು ಕೂತಿದ್ದೆ. ಅವನ ಗಾಡಿ ಶಬ್ದ ಕೇಳಿ, ಅತ್ತ್ಯಾ ಕೈಯಾಗ ಏನೋ ಸ್ವಲ್ಪ ಸಾಮಾನುಗಳನ್ನ ಇಟ್ಟಕೊಂಡು\ಹೊರಗ ಬಂದು, ಅವ್ನ್ ಕಡೆ ಹೊರಟ್ರು. ನಾನು ಅವ್ರ್ ಹಿಂದೆ ಹೊದೇ. ಅವ್ರ ಕೈಯಾಗ ಸ್ವಲ್ಪ ನೂಲಿನ ದಾರ, ಹಳೆ ಕಬ್ಬಿಣ, ಹಳೆ ಬಟ್ಟೆ, ದಾರು ಬಾಟ್ಲಿಗಳು ಇದ್ವು. ಆ ಐಸ್ ಕ್ರೀಮ್ ನವನಿಗೆ - 'ನೋಡಪ್ಪ, ನನ್ನ ಹತ್ರ ದುಡ್ಡಿಲ್ಲ, ಇವ್ ಸಾಮಾನ ತೊಗೊಂಡು, ಇಂವನಿಗೊಂದು ಐಸ್ ಕ್ರೀಮ್ ಕೊಡು' ಅಂತ ಚವ್ಕಾಶಿ ಮಾಡಿದ್ರು. ಆಗ , ಹಿಂಗೆಲ್ಲ ನಡೀತಿತ್ತು. ಆವಾ ತೊಗೊಂಡಾ , ನಂಗ್ ಬಾಳ ಇಷ್ಟ ಆಗೋ ಆ ಮಿಲ್ಕಿ ಐಸ್ ಕ್ರೀಮ್ ನಾ ತೊಗೊಂಡೆ. ಗಂಗಮ್ಮತ್ತೆ ಖುಷಿ ಆಗಿದ್ರು ನನ್ನ ನೋಡಿ.
ಆ ಒಂದು ಘಟನಾ ಇನ್ನು ಕಣ್ಣ್ ಕಟ್ಟಿದಂಗ್ ಐತಿ. ಇವತ್ತಿಗೂ ನಾ ಗಂಗಮ್ಮತ್ತ್ಯಾ ನೆನೆಸಿ ಕೊಳ್ಳದಂಗೆ ಐಸ್ ಕ್ರೀಮ್ ತಿಂದದ್ದೇ ಇಲ್ಲ! ರಜದಲ್ಲಿ ಮಾತ್ರ ಅವ್ರ್ ಜೊತೆ ಕಾಲ ಕಳೆದಿದ್ದು. ಆಗ, ಅವರಿಗಿನ್ನೂ ಮದುವೆ ಆಗಿರಲಿಲ್ಲ. 'ಗಂಗಮ್ಮ ನಿನ್ನ ಗಂಡ ಯಾರಮ್ಮ' ಹಾಡನ್ನು ಹಾಡಿ ನಾನು, ನನ್ನ ತಮ್ಮ, ತಂಗ್ಯಾರು ಅವರನ್ನ ಗೋಳ ಹೊಯ್ಕೋತಿದ್ದ್ವಿ. ಅಜ್ಜಿಗೆ ಹೇಳಿ ನಮ್ಮಗೆ ಬೈಸ್ತಿದ್ರು ಅವ್ರು . ನಾನು ೪-೫ ನೇ ಕ್ಲಾಸ್ ಇದ್ದಾಗ, ಡೆಲಿವೆರಿ ಆದ ಮ್ಯಾಲೆ ತಮ್ಮ ಮಗು ಜೊತೆಗೆ ಪ್ರಾಣ ಬಿಟ್ರು.ಅವ್ರ ರಿಣಾ , ಪ್ರೀತಿ ಅಷ್ಟಕ್ಕ ಇತ್ತು. ಈಗ ಅದೆಲ್ಲ ಒಂದು ಸವಿ ನೆನೆಪು.

Subscribe to:
Posts (Atom)