Dear Katrina Kaif
You're like an Irani knife
You're my life
Wanna become my wife?
I am Kiran
You're Katrina
My name is in yours
So shall I be yours
You're in my dreams
You're in my rhymes
I am in love with you
I wanna live with you
Will wait for you dear
Till the day you appear
Years, years and years
Kiran is always yours
- Written on Katrina Kaif, on 11th Mar 03, while I was in Pune and Katrina Kaif had just entered bollywood.
Sunday, November 1, 2009
Thursday, October 29, 2009
ನೀ ಜೋಕೆ!
ಧಣಿಯೇ,
ಇನ್ನೂ ಕೆಲವೇ ದಿನಗಳಲ್ಲಿ
ನೀವಾಗುವಿರಿ ಅಪ್ಪಾಜೀ;
ಈ ದಿನಗಳಲ್ಲಿ,
ನಿಮ್ಮ ಸನಿಹ-ನನ್ನ ಬಯಕೆ
ನಿಮ್ಮ ಆದ್ಯತೆ-ನನ್ನ ಕಾಳಜೀ;
ಆದರೆ ನಿಮ್ಮದೋ,
ಸದಾ ಈ ಊರು-ಆ ಊರು
ಯಾವುದೋ
ದೂರದ ಊರ ಪಯಣ,
ಇಲ್ಲವೇ,
ಈ ಕಥೆ-ಆ ಕಾದಂಬರಿ
ಯಾವುದೋ
ಪುಸ್ತಕದ ಪಾರಾಯಣ
ಇನ್ನೂ ಕೆಲವೇ ದಿನಗಳಲ್ಲಿ
ನೀವಾಗುವಿರಿ ಅಪ್ಪಾಜೀ;
ಈ ದಿನಗಳಲ್ಲಿ,
ನಿಮ್ಮ ಸನಿಹ-ನನ್ನ ಬಯಕೆ
ನಿಮ್ಮ ಆದ್ಯತೆ-ನನ್ನ ಕಾಳಜೀ;
ಆದರೆ ನಿಮ್ಮದೋ,
ಸದಾ ಈ ಊರು-ಆ ಊರು
ಯಾವುದೋ
ದೂರದ ಊರ ಪಯಣ,
ಇಲ್ಲವೇ,
ಈ ಕಥೆ-ಆ ಕಾದಂಬರಿ
ಯಾವುದೋ
ಪುಸ್ತಕದ ಪಾರಾಯಣ
ನಾ ಕೊಟ್ಟಿರುವೆ
ನಿಮ್ಮ ಕಂದನಿಗೆ ದೂರು,
ತಿಳಿಸಿರುವೆ
ಅದಕ್ಕೆನನಗಾದ ಬೇಜಾರು,
ಅದು ಈಗ
ನಿಮ್ಮ ಮೇಲೆಯೇ ಮುನಿಸಿ,
ಪುಟ್ಟ ಪಾದದೀ
ನನ್ನೊಳಗೆ ತಾಗಿಸಿ,
ಹೇಳುತಿರುವುದು ನಿಮಗೆ -
"ನಾ ಬರುವವರೆಗೆ
ಜೊತೆ ನೀಡಿ ಅಮ್ಮಳಿಗೆ,
ಇಲ್ಲದಿದ್ದಲ್ಲಿ,
ನಾ ಬಂದ ನಂತರ
ನನ್ನ ಪುಟ್ಟ ಪಾದದೀ
ಸರಿ ಬೀಳುವವು ನಿಮಗೆ,
ಜೋಕೆ! ಜೋಕೆ! ಜೋಕೆ!"
Saturday, August 8, 2009
ಹೀಗೊಂದು ಸಂಜೆ
ಸೂರ್ಯಾಸ್ತವಾಗುತ್ತಿತ್ತು. ಸಂಜೆ, ೬.೩೦ ಯ ಸಮಯ. ಕೈಕಾಲು ಮುಖ ತೊಳೆದು, ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಅವಳ ಮನೆಗೆ ಹೊರಟೆ. ನನ್ನ ಹತ್ರ ಆ ದೂದವಾಲಾ ಟೈಪ್ ಹ್ಯಾಂಡಲ್ ಇರುವ ಅಟ್ಲಸ್ ಸೈಕಲ್ ಇತ್ತು. ಅದನ್ನ ತೆಗೊಂಡು ಹೋಗೋಕೆ ಇಷ್ಟವಾಗಲಿಲ್ಲ. ನಡಕೊಂಡೆ ಹೋದೆ. ಅವಳಿಗಿನ್ನು ಕಾಲೇಜ್ ಶುರುವಾಗಿರಲಿಲ್ಲ. ನನಗೆ ಶುರುವಾಗಿ ೧೫ ದಿವಸಗಳಾಗಿದ್ದವು. ಅವಳಿಗೇನೋ ಕಾಲೇಜ್ ಬಗ್ಗೆ ತಿಳಿದುಕೊಳ್ಳಬೇಕಿತ್ತಂತೆ. "ಯಾವಾಗಲಾದರೂ ಸಂಜೆ ಫ್ರೀ ಇದ್ದಾಗ ಬಾ" ಅಂತ ಮೊನ್ನೆ ಸಿಕ್ಕಾಗ ಹೇಳಿದ್ದಳು.
"ಹಾ ಇದಾಳೇ ಬನ್ನಿ. ಏನ್ನಮ್ಮಾ ಶೃತಿ, ಯಾರೋ ಬಂದಿದಾರೇ ನಿನ್ನ ಭೇಟಿಯಾಗೊಕೆ. ಒಳಗೆ ಬನ್ನಿ" ಹಾಲ್‍ನಲ್ಲಿ ಕುಳಿತಿದ್ದ ಅವಳ ಚಿಕ್ಕಪ್ಪ ಕರೆದರು.
ಅವರು ೫-೬ ಜನ ಕೈಕೆಳಗೆ ಕೆಲಸ ಮಾಡುವವರ ಜೊತೆ ಏನೊ ಚರ್ಚಿಸುತ್ತಿದ್ದರು.
ಅವರನ್ನು ಹೊರಗೇ ಬಿಟ್ಟು, ಗೇಟ್ ಹಾಕಿಕೊಂಡು, ಬಾಗಿಲ ಮುಂದು ಮಾಡಿ, ಒಳಗೆ ಬಂದಳು ಶೃತಿ.
ಲೈಟ್ ಆನ್ ಮಾಡಿ, ನನ್ನ ಎದುರಿಗಿದ್ದ ಟೇಬಲ್ ಆಚೆಗೇ ಚೇರ್ ಮೇಲೆ ವಿರಾಮಿಸುತ್ತಾ -
"ಇವತ್ತು ಯಾಕೊ ಕರೇಂಟು ತೆಗೆದು ಬಿಟ್ಟ. ದಿನಾಲು ಹೋಗೊಲ್ಲ"
ಗಣಿತಶಾಸ್ತ್ರ ಅವಳಿಗೆ ಮೊದಲಿನಿಂದಲೂ ಕಷ್ಟದ ವಿಷಯವೇ. ಅದೂ ನನಗೂ ಗೊತ್ತಿತ್ತು. ಅವಳು ಅದನ್ನೇ ವಿವರಿಸುತ್ತಿದ್ದಳು. ನಾನು ಏನೂ ಹೇಳಲಿಲ್ಲ.ನನ್ನಲ್ಲಿನ ಗೊಂದಲ ನನ್ನ ಕೆದುಕುತಿತ್ತು -"ನಾನು ಇವಳನ್ನು ಇಷ್ಟಪಡುತ್ತಿದ್ದೀನಿ ಅಂತಾ ಈಗಲೇ ಹೇಳಿಬಿಡಲಾ? ಇಂತಾ ಸುಸಂಧಿ ನನಗೆ ಇಷ್ಟು ಬೇಗ ಒದಗಿ ಬರುತ್ತದೆಂದು ನಾನು ಅಂದುಕೊಂಡೆ ಇರಲಿಲ್ಲ. ಆಯ್ತು, ಇಂಥ ಒಳ್ಳೆಯ ಸಮಯ ಸಿಕ್ಕಿದೆಯೆಂದರೇ, ಯಾಕೆ ಬಿಡಲಿ? ಹೇಳಿಯೇ ಬಿಡೋಣ. ಆದರೆ, ಏನಂತಾ ಹೇಳಲಿ? ಒಮ್ಮೆಲೇ 'ನಾನು ನಿನ್ನ ಪ್ರೀತಿಸುತ್ತಿದ್ದೀನಿ' ಅಂತ ಹೇಗೆ ಹೇಳೋಕಾಗುತ್ತೆ? ಅದು ಬೇರೆ, ನಮ್ಮಿಬ್ಬರಲ್ಲಿ ಅಷ್ಟು ಗಾಢವಾದ ಸ್ನೇಹವೂ ಇಲ್ಲ. ಹೇಗೆ ಶುರು ಮಾಡೋದು?"
"ಇರಲಿ ಬಿಡು ಶೃತಿ, ಹೇಗಾದರೂ ಮಾಡಬಹುದು. ನಿನಗಷ್ಟೇ ಕಷ್ಟವಾದರೆ, ನಾನೇ ಹೇಳಿಕೊಡ್ತೆನಿ""ಢಣ್..." ಗೋಡೆ ಗಡಿಯಾರ ಶಬ್ದ ಮಾಡಿತು. ಅವಳ ಕಣ್ಣು ಮೇಣದ ದೀಪದಿಂದ ಕದಲಿತು.
"ಕೊನೆಯ ಬಾರಿಯ ಸ್ಪೋಟ್ಸ್ ಡೇಯಲ್ಲಿ ನೀನು ಆ ೪*೧೦೦ ಮೀ. ರೀಲೆಯಲ್ಲಿ ನಿಮ್ಮ ಟೀಮ್‍ನ್ನಾ ಗೆಲ್ಲಿಸಿದ್ದು ನನಗೆ ಚೆನ್ನಾಗಿ ನೆನಪಿದೆ"
ಹಾಗೆಂದುಕೊಂಡವನೇ, ಮೊದಲು ನಮ್ಮಿಬ್ಬರಲ್ಲಿ ನಡೆಯುತ್ತಿದ್ದ ಸಂಭಾಷಣೆಯ ವಿಷಯಕ್ಕೆ ಅಂತ್ಯ ಹಾಡಿದೆ.
"ತಗೋ..." ಲೋಟ ಕೈಗಿತ್ತಳು.
ಟ್ಯೂಬ್ ಲೈಟ್ ಪಕ್-ಪಕ್ ಅಂತಾ ಸಪ್ಪಳ ಮಾಡುತ್ತಾ ಆನ್ ಆಯಿತು. ನಾನು ತಲೆ ಬಗ್ಗಿಸಿ ಕಣ್ಣು ಮುಚ್ಚಿಕೊಂಡೆ. ಮೆಲ್ಲಗೆ ಕಣ್ಣು ತೆರೆದೆ. ಅವಳು ಕಣ್ಣು ಸಣ್ಣದಾಗಿ ಮಾಡಿ, ಕೈಗಳನ್ನು ತನ್ನ ಕಣ್ಣಿಗೆ ಹಿಡಿದಿದ್ದಳು.
ಯಾರೊ ಗೇಟ್ ತೆಗೆದ ಶಬ್ದ. ಕಿಟಕಿ ತೆಗೆದದ್ದೆಯಿತ್ತು. ಪಕ್ಕದ ಮನೆಯವರು ಇರಬಹುದು ಅನ್ನಕೊಂಡೆ. ಅವಳು ಕಿಟಕಿಯ ಕಡೆಗೆನೂ ನೋಡಲಿಲ್ಲ. "ಟರ್...", "ಟರ್..." ಕಾಲಿಂಗ್ ಬೆಲ್ ಹೊಡಕೊಳ್ತು. ನಾನು ಬಾಗಿಲ ಬಳಿ ನೋಡಿದೆ.ಶೃತಿ ಎದ್ದು ಹೋಗಿ ಬಾಗಿಲು ತೆರೆದಳು.
ಮುಂದುವರೆದವು, ಉಭಯ-ಕುಶಲೋಪಚಾರದ ಮಾತುಗಳು.
"ಆಯ್ತು, ನಾನಿನ್ನು ಹೋರಡ್ತೀನಿ""ಅರೇ, ಕೂತ್ಕೋಳಪ್ಪ, ಊಟ ಮಾಡ್ಕೋಂಡು ಹೋಗುವಿಯಂತೆ. ಇನ್ನೆನೂ ಅಂಕಲ್ ಕೂಡ ಬಂದು ಬಿಡ್ತಾರೆ"
ಚಪ್ಪಲ ಹಾಕಿಕೊಂಡು ಹೊರಗೆ ಬಂದೆ. ಶೃತಿ ಕೂಡ ನನ್ನ ಹಿಂದೆ ಬಂದಳು. ನಾನು ಗೇಟ್ ತೆರೆದು ಹೊರಗೆ ಹೋದೆ. ಅವಳು ಅಲ್ಲೇ ನಿಂತಿದ್ದಳು.
- ೧ -
"ಶೃತಿ ಇದಾಳಾ?""ಹಾ ಇದಾಳೇ ಬನ್ನಿ. ಏನ್ನಮ್ಮಾ ಶೃತಿ, ಯಾರೋ ಬಂದಿದಾರೇ ನಿನ್ನ ಭೇಟಿಯಾಗೊಕೆ. ಒಳಗೆ ಬನ್ನಿ" ಹಾಲ್‍ನಲ್ಲಿ ಕುಳಿತಿದ್ದ ಅವಳ ಚಿಕ್ಕಪ್ಪ ಕರೆದರು.
ಅವರು ೫-೬ ಜನ ಕೈಕೆಳಗೆ ಕೆಲಸ ಮಾಡುವವರ ಜೊತೆ ಏನೊ ಚರ್ಚಿಸುತ್ತಿದ್ದರು.
"ಛೇ!, ಶಿವನ ( ಪಾರ್ವತಿ ) ಪೂಜೆಗೇ ಅಂತಾ ಬಂದರೆ, ಕರಡಿಗಳೇ ಕುಳಿತಿದೆಯಲ್ಲಪ್ಪಾ!" ಅಂದುಕೊಂಡು, ಅಲ್ಲೇ ಬಾಗಿಲಬಳಿ ನಿಂತೆ.
"ಓ! ಕಿರಣ್, ಬಾ ಒಳಗ ಬಾ" ಅಂತಾ ಹೇಳ್ತಾನೇ ಒಳಗಿನಿಂದ ಬಂದಳು ಶೃತಿ.
"ನಿನ್ನೇ ಮಾತಾಡಿಸೋಣ ಅಂತಾ ಬಂದೇ. ಇವರೆಲ್ಲಾ ಇದ್ದಾರೆ. ಮತ್ತೊಮ್ಮ ಬರ್ತೀನಿ ಬಿಡು"
"ಹೇ...ಇಲ್ಲಾ, ಅವರು ಇನೇನೂ ಹೊಗ್ತಾರೇ, ಕೂತ್ಕೊಳೋ"
ನಾನು ಸೊಫಾ ಮೇಲೆ ಕುಳಿತಿದ್ದೇ ತಡ, ಅವರ ಚಿಕ್ಕಪ್ಪ ಎದ್ದೇ ಬಿಟ್ಟರು.
"ನಾನಿನ್ನು ಹೊರಡುತಿನಮ್ಮಾ ಶೃತಿ, ಮನೆ ಕಡೇ ಜೋಪಾನ" ಅಂತಾ ಹೊರನಡೆದರು.
"ಓ! ಕಿರಣ್, ಬಾ ಒಳಗ ಬಾ" ಅಂತಾ ಹೇಳ್ತಾನೇ ಒಳಗಿನಿಂದ ಬಂದಳು ಶೃತಿ.
"ನಿನ್ನೇ ಮಾತಾಡಿಸೋಣ ಅಂತಾ ಬಂದೇ. ಇವರೆಲ್ಲಾ ಇದ್ದಾರೆ. ಮತ್ತೊಮ್ಮ ಬರ್ತೀನಿ ಬಿಡು"
"ಹೇ...ಇಲ್ಲಾ, ಅವರು ಇನೇನೂ ಹೊಗ್ತಾರೇ, ಕೂತ್ಕೊಳೋ"
ನಾನು ಸೊಫಾ ಮೇಲೆ ಕುಳಿತಿದ್ದೇ ತಡ, ಅವರ ಚಿಕ್ಕಪ್ಪ ಎದ್ದೇ ಬಿಟ್ಟರು.
"ನಾನಿನ್ನು ಹೊರಡುತಿನಮ್ಮಾ ಶೃತಿ, ಮನೆ ಕಡೇ ಜೋಪಾನ" ಅಂತಾ ಹೊರನಡೆದರು.
ಅವರನ್ನು ಹೊರಗೇ ಬಿಟ್ಟು, ಗೇಟ್ ಹಾಕಿಕೊಂಡು, ಬಾಗಿಲ ಮುಂದು ಮಾಡಿ, ಒಳಗೆ ಬಂದಳು ಶೃತಿ.
ಲೈಟ್ ಆನ್ ಮಾಡಿ, ನನ್ನ ಎದುರಿಗಿದ್ದ ಟೇಬಲ್ ಆಚೆಗೇ ಚೇರ್ ಮೇಲೆ ವಿರಾಮಿಸುತ್ತಾ -
"ಹೇಗಿದಿಯಾ ಕಿರಣ್?"
"ಚೆನ್ನಾಗಿದ್ದೀನಿ ಶೃತಿ"
"ಕಾಫೀ, ಟೀ, ಏನೂ ತರಲಿ?"
"ಏನೂ ಬೇಡ ಕಣೇ, ಅವೆಲ್ಲಾ ನಾನು ಕುಡಿಯೊಲ್ಲಾ"
"ಪಾನಕ ಮಾಡಲಾ?"
"ಬೇಡ...ಬೇಡ...ಪರವಾಗಿಲ್ಲಾ. ಆರಾಮಾಗಿ ಕೂತ್ಕೊ"
"ಎಲ್ಲಿ ಅಮ್ಮ, ತಂಗಿ ಕಾಣಿಸುತ್ತಿಲ್ಲಾ?""ಚೆನ್ನಾಗಿದ್ದೀನಿ ಶೃತಿ"
"ಕಾಫೀ, ಟೀ, ಏನೂ ತರಲಿ?"
"ಏನೂ ಬೇಡ ಕಣೇ, ಅವೆಲ್ಲಾ ನಾನು ಕುಡಿಯೊಲ್ಲಾ"
"ಪಾನಕ ಮಾಡಲಾ?"
"ಬೇಡ...ಬೇಡ...ಪರವಾಗಿಲ್ಲಾ. ಆರಾಮಾಗಿ ಕೂತ್ಕೊ"
"ಇಲ್ಲಾ ಅವರು ಶಾಪಿಂಗೆ ಹೋಗಿದ್ದಾರೆ. ಬರೋದು ಲೇಟೇ ಆಗುತ್ತೆ. ಮನೆಯಲ್ಲಿ ಯಾರು ಇಲ್ಲ"
"ಓಹ್! ಹಾಗೇಂದರೇ, ಮನೆಯಲ್ಲಿ ನಾವಿಬ್ಬರೇ!!" ಮನದಲ್ಲೇ ನುಡಿದೆ. ಹಲ್ಲಿ ಲೋಚ್ಚಗುಟ್ಟಿತು.
"ಈ ಮನೆ ಚೆನ್ನಾಗಿದೆಯಲ್ಲಾ. ಎಷ್ಟು ವರ್ಷವಾಯಿತು ಬಂದು?"
"ಹ್ಹ...ಹೌದು, ತುಂಬಾ ಚೆನ್ನಾಗಿದೆ. ಮುಂದಿನ ತಿಂಗಳು ಮುಗಿದರೆ ೧ ವರ್ಷ ಆಗುತ್ತೆ"
"ಮತ್ತೇ, ನೀನು ಹೇಗಿದಿಯಾ? ರಜೆಯಲ್ಲಿ ಏನೂ ಮಾಡಿದೆ?"
"ನಾನಂತು ಫಸ್ಟ್ ಕ್ಲಾಸ್ ಆಗಿದೀನಿ ಕಿರಣ್. ಬೆಂಗಳೂರಿಗೆ ಹೋಗಿದ್ದೆ. ಹೋದ ವಾರನೇ ಬಂದದ್ದು. ವಾಪಾಸ್ ಬಂದಾಗಿನಿಂದ ಭರತನಾಟ್ಯದಲ್ಲಿ ವಿದ್ವತ್ ಪರೀಷೆಗಾಗಿ ಸಿದ್ದತೆ ನಡೆಸಿದ್ದೀನಿ"
"ಗುಡ್...ಗುಡ್...ಯಾವಾಗಿದೇ ಪರೀಕ್ಷೇ?"
"ಮುಂದಿನ ವಾರನೇ. ಕಾಲೇಜ್ ಶುರುವಾಗೊದರೊಳಗೆ ಮುಗಿಸಿಬಿಡೋಣ ಅಂತಾ ಪ್ಲ್ಯಾನ್ ಮಾಡಿಕೊಂಡಿದೀನಿ"
"ನೀನು ಯಾವಾಗಿನಿಂದ ಈ ಭರತನಾಟ್ಯ ಕಲಿಯೋಕೆ..."
ಹೀಗೆ, ಆ ಮುಸ್ಸಂಜೆಯ ಏಕಾಂತದಲಿ, ನಾವಿಬ್ಬರೇ ಕುಳಿತಿದ್ದು. ನಮ್ಮಗಳ ನಡುವೆ ಮಾತುಗಳು ಮೊಳಕೆಹೊಡೆಯುತ್ತಿದ್ದವು. ಮಧ್ಯೆದಲ್ಲಿ ಎಲ್ಲಾದರೂ ಮಾತುಗಳು ನಿಂತಾಗ ಗೋಡೆ ಗಡಿಯಾರದ 'ಟಿಕ್...', 'ಟಿಕ್...' ಕಿವಿಗೇ ಬೀಳುತ್ತಿತ್ತು. ನಮ್ಮಿಬ್ಬರ ಮಾತುಗಳನ್ನು ಬಿಟ್ಟರೆ, ಅಷ್ಟರ ಮಟ್ಟಿಗಿನ ನಿಶ್ಯಬ್ದ ಆ ರೂಮಿನಲ್ಲಿ. ಇಂತಹ ಏಕಾಂತ ಸಿಕ್ಕಿದ್ದು ನನಗೆ ಅಚ್ಚರಿಯನ್ನೇ ಮಾಡಿತ್ತು.
"ಇವತ್ತೇ ಹೇಳಿ ಬಿಡಲಾ ಇವಳಿಗೆ?" ಶುರುವಾಯಿತು ನನ್ನೊಳಗೆ ಒಂದು ಸಂಭಾಷಣೆ.
"ಓಹ್..." ಇಬ್ಬರೂ ಒಂದೇ ಸಲೇ ಅಂದೆವು.
"ಛೇ! ಕರೇಂಟು ಹೋಯಿತು""ಒಂದು ನಿಮಿಷ ಬಂದೆ."ಓಹ್! ಹಾಗೇಂದರೇ, ಮನೆಯಲ್ಲಿ ನಾವಿಬ್ಬರೇ!!" ಮನದಲ್ಲೇ ನುಡಿದೆ. ಹಲ್ಲಿ ಲೋಚ್ಚಗುಟ್ಟಿತು.
"ಈ ಮನೆ ಚೆನ್ನಾಗಿದೆಯಲ್ಲಾ. ಎಷ್ಟು ವರ್ಷವಾಯಿತು ಬಂದು?"
"ಹ್ಹ...ಹೌದು, ತುಂಬಾ ಚೆನ್ನಾಗಿದೆ. ಮುಂದಿನ ತಿಂಗಳು ಮುಗಿದರೆ ೧ ವರ್ಷ ಆಗುತ್ತೆ"
"ಮತ್ತೇ, ನೀನು ಹೇಗಿದಿಯಾ? ರಜೆಯಲ್ಲಿ ಏನೂ ಮಾಡಿದೆ?"
"ನಾನಂತು ಫಸ್ಟ್ ಕ್ಲಾಸ್ ಆಗಿದೀನಿ ಕಿರಣ್. ಬೆಂಗಳೂರಿಗೆ ಹೋಗಿದ್ದೆ. ಹೋದ ವಾರನೇ ಬಂದದ್ದು. ವಾಪಾಸ್ ಬಂದಾಗಿನಿಂದ ಭರತನಾಟ್ಯದಲ್ಲಿ ವಿದ್ವತ್ ಪರೀಷೆಗಾಗಿ ಸಿದ್ದತೆ ನಡೆಸಿದ್ದೀನಿ"
"ಗುಡ್...ಗುಡ್...ಯಾವಾಗಿದೇ ಪರೀಕ್ಷೇ?"
"ಮುಂದಿನ ವಾರನೇ. ಕಾಲೇಜ್ ಶುರುವಾಗೊದರೊಳಗೆ ಮುಗಿಸಿಬಿಡೋಣ ಅಂತಾ ಪ್ಲ್ಯಾನ್ ಮಾಡಿಕೊಂಡಿದೀನಿ"
"ನೀನು ಯಾವಾಗಿನಿಂದ ಈ ಭರತನಾಟ್ಯ ಕಲಿಯೋಕೆ..."
ಹೀಗೆ, ಆ ಮುಸ್ಸಂಜೆಯ ಏಕಾಂತದಲಿ, ನಾವಿಬ್ಬರೇ ಕುಳಿತಿದ್ದು. ನಮ್ಮಗಳ ನಡುವೆ ಮಾತುಗಳು ಮೊಳಕೆಹೊಡೆಯುತ್ತಿದ್ದವು. ಮಧ್ಯೆದಲ್ಲಿ ಎಲ್ಲಾದರೂ ಮಾತುಗಳು ನಿಂತಾಗ ಗೋಡೆ ಗಡಿಯಾರದ 'ಟಿಕ್...', 'ಟಿಕ್...' ಕಿವಿಗೇ ಬೀಳುತ್ತಿತ್ತು. ನಮ್ಮಿಬ್ಬರ ಮಾತುಗಳನ್ನು ಬಿಟ್ಟರೆ, ಅಷ್ಟರ ಮಟ್ಟಿಗಿನ ನಿಶ್ಯಬ್ದ ಆ ರೂಮಿನಲ್ಲಿ. ಇಂತಹ ಏಕಾಂತ ಸಿಕ್ಕಿದ್ದು ನನಗೆ ಅಚ್ಚರಿಯನ್ನೇ ಮಾಡಿತ್ತು.
"ಇವತ್ತೇ ಹೇಳಿ ಬಿಡಲಾ ಇವಳಿಗೆ?" ಶುರುವಾಯಿತು ನನ್ನೊಳಗೆ ಒಂದು ಸಂಭಾಷಣೆ.
"ಓಹ್..." ಇಬ್ಬರೂ ಒಂದೇ ಸಲೇ ಅಂದೆವು.
"ಮೇಣದ ದೀಪ ತೆಗೊಂಡು ಬರತೀನಿ" ಅಂತಾ ಒಳ ಹೋದಳು.
ಈಗಂತೂ, ನನಗೆ ಅಚ್ಚರಿಯ ಮೇಲೆ ಅಚ್ಚರಿ! ತಲೆಯಲ್ಲಿ ಯೋಚನೆಗಳದೇ ಲಹರಿ - "ಇದೇನಪ್ಪಾ ಮನೆಯಲ್ಲಿ ಯಾರು ಇಲ್ಲಾ, ಈಗ ಕರೇಂಟೂ ಬೇರೆ ಇಲ್ಲಾ!. ಹೊಸದಾಗಿ ಮದುವೆಯಾದವರು, ಪ್ರೇಮಿಗಳು ಈ ಕ್ಯಾಂಡಲ್ ಲೈಟ್‍ಗಾಗಿ ಹೋಟೆಲ್, ಬಾರ್, ರೆಸ್ಟೋರೆಂಟ್ ಅಂತಾ ಪರದಾಡಿದರೇ, ಇನ್ನೂ ಪ್ರೀತಿಯೇ ವ್ಯಕ್ತಪಡಿಸದ ನನಗೇ, ಈಗಲೇ ಈ ಬಂಪರ್ ಬಹುಮಾನ ಸಿಕ್ಕಿಬಿಟ್ಟಿದೆಯಲ್ಲಾ!"
ಸುತ್ತಲೂ ಕತ್ತಲು. ಏನೂ ಕಾಣಿಸುತ್ತಿಲ್ಲ. ಒಳಗಡೆಯಿಂದ ಬೆಂಕಿಪೊಟ್ಟಣದ ಕಡ್ಡಿಯನ್ನು ಗೀಚುತ್ತಿದ್ದ ಸಪ್ಪಳ. ನಾನು ಆ ರೂಮಿನ ಬಾಗಿಲ ಕಡೆಗೆ ನೋಡುತ್ತಿದ್ದೆ. ಮೆಲ್ಲನೇ ಒಳಗಿನಿಂದ ಬೆಳಕು ಮೂಡಿತು. ಮತ್ತದೇ ನಿಶ್ಯಬ್ದ, ಗೋಡೆ ಗಡಿಯಾರದ 'ಟಿಕ್...', 'ಟಿಕ್...' ಶಬ್ದ. ಒಳಗಡೆ ಮೂಡಿದ್ದ ಆ ಬೆಳಕು, ನಿಧಾನವಾಗಿ ಬಾಗಿಲ ಬಳಿ ಬರತೊಡಗಿತು. ಅವಳು ಮೇಣದ ದೀಪನ ಕೈಯಲ್ಲಿ ಹಿಡಿದು ಹೊರಗೆ ಬಂದಳು. ಮುಖಕ್ಕೆ ಹತ್ತಿರ ಹಿಡಿದಿದ್ದರಿಂದ, ಅದರ ಬೆಳಕು ಅವಳ ಮುಖದ ಮೇಲೆ ಸಂಪೂರ್ಣವಾಗಿ ಚೆಲ್ಲಿತ್ತು -
ಅವಳನ್ನಲಂಕರಿಸಿದ ಆ ಕಿವಿಯೋಲೆ,
ಅದರ ತಂಗಿ ಮೂಗಿನೊಡತಿ-ಮೂಗುತಿ,ಇವರಿಬ್ಬರ ಶೃಂಗಾರ ಸಖಿ
ಆ ಕಿರು ಬಿಂದಿಗೆ,ಈ ಎಲ್ಲ ಬಿನ್ನಾಣಗಿತ್ತಿಯರು
ಹೊತ್ತು ತಂದವುಆ ಚೆಲುವ ಮೊಗವ
ಒಂದೇ ಕ್ಷಣದ ಆ ದೃಶ್ಯ ಮನದಿಂದ ಎಂದಾದರು ಅಳಿಯಲೂ ಸಾಧ್ಯವೇ? ದಿನದ ಸಮಯದಲ್ಲಿ ಎಷ್ಟೊ ಬಾರಿ ಅವಳನ್ನು ನೋಡಿದ್ದೆ, ಆದರೆ ಇಷ್ಟು ಸ್ಪಷ್ಟವಾಗಿ, ಸ್ಪುಟವಾಗಿ ಎಂದೂ ನೋಡಿರಲಿಲ್ಲ. ಮೊದಲ ಸಲ ಚಂದ್ರನ ಬೆಳದಿಂಗಳಿಗಿಂತ, ಆ ಮೇಣದ ದೀಪದ ಬೆಳಕೇ ಇಷ್ಟವಾಗಿತ್ತು.
- ೨ -
ಆ ಮೇಣದ ದೀಪವನ್ನು, ಟೇಬಲ್ ಮೇಲೆ ಇಟ್ಟು ನನ್ನ ಎದುರಿಗೆ ಕುಳಿತಳು. ಮತ್ತೆ ಅಲ್ಲಿ ಆವರಿಸಿದ್ದ ಮೌನವನ್ನು ಮುರಿದು, ಮುಂದುವರೆದವು ನಮ್ಮ ಮಾತುಗಳು -
"ಇವತ್ತು ಯಾಕೊ ಕರೇಂಟು ತೆಗೆದು ಬಿಟ್ಟ. ದಿನಾಲು ಹೋಗೊಲ್ಲ"
"ಲೋಡ್ ಶೆಡ್ಡಿಂಗ್ ಶುರು ಮಾಡಿರಬೇಕು ಕಣೇ. ಬಹುಶಃ ಇವತ್ತಿಂದ್ದ ದಿನಾ ಹೋಗುತ್ತದೆಯೆನೋ"
"ನಿನ್ನ ಬಗ್ಗೆ ಹೇಳೋ. ಏನೂ ಹೇಳಲೇ ಇಲ್ಲಾ. ಹೇಗಿದೇ ಕಾಲೇಜ್ ಲೈಫ್?"
"ಚೆನ್ನಾಗಿದೆ. ಲ್ಯಾಬ್ ಕ್ಲಾಸ್‍ಗಳು ಶುರುವಾಗಿವೆ. ರಸಾಯನಶಾಸ್ತ್ರವೇ ಸ್ವಲ್ಪ ಕಷ್ಟ. ಅವೆನೆನೊ ರಸಾಯನ ಕ್ರಿಯೆಗಳು. ನೆನಪೇ ಇರೋಲ್ಲ"
"ನನಗೆ ರಸಾಯನಶಾಸ್ತ್ರ ಇಷ್ಟವಾದ ವಿಷಯ. ಗಣಿತಶಾಸ್ತ್ರವೇ ಆಗಿ ಬರೋಲ್ಲಾ. ಅದೇಕೊ, ಮೊದಲಿನಿಂದಲೂ ನನಗೆ ಸರಿಹೋಗಲೆ ಇಲ್ಲ. ಎಮ್.ಎನ್.ಸಿ ಕಾಲೇಜಿನ ಪ್ರೋಫೆಸರ್ ಬಳಿ ಟ್ಯೂಶನ್‍ಗೇ..."ಗಣಿತಶಾಸ್ತ್ರ ಅವಳಿಗೆ ಮೊದಲಿನಿಂದಲೂ ಕಷ್ಟದ ವಿಷಯವೇ. ಅದೂ ನನಗೂ ಗೊತ್ತಿತ್ತು. ಅವಳು ಅದನ್ನೇ ವಿವರಿಸುತ್ತಿದ್ದಳು. ನಾನು ಏನೂ ಹೇಳಲಿಲ್ಲ.
ನನಗೇನು ತೋಚುತಾನೆ ಇರಲಿಲ್ಲ. ಕಿಟಕಿಯ ಪಕ್ಕದಲ್ಲೇ ಕುಳಿತಿದ್ದರಿಂದ್ದ, ಸಣ್ಣಗೆ ಬೀಸುತ್ತಿದ್ದ ಗಾಳಿ ಮೈ ಸೋಕುತ್ತಿತ್ತು. ನನ್ನನ್ನೇ ನೋಡುತಿದ್ದ ಆ ಮೇಣದ ದೀಪ -
ಸುತ್ತ-ಮುತ್ತಲೂ
ಆವರಿಸಿರುವ ಈ ಕತ್ತಲೂ,
ನಿಮ್ಮಿಬ್ಬರ ನಡುವೆ ನಾ ಮೂಡಿಸಿರುವ ಬೆಳಕಿನಂಗಳ,ಸುತ್ತ-ಮುತ್ತಲೂ
ಆವರಿಸಿರುವ ಈ ಕತ್ತಲೂ,
ಲೋ ಕಿರಣ,
ಪ್ರೀತಿಯ ಸಂಭಾಷಣೆಗೆನಿನಗೆ ಬೇಕಿನ್ನೇ ಬೇರೆಯ ತಾಣ?
ಅಂತಾ ಹೇಳಿ, ಸಣ್ಣಗೆ ಬೀಸುತ್ತಿದ್ದ ಆ ಗಾಳಿಗೇ, ಪಟ-ಪಟನೇ ಅಲ್ಲಾಡೀ ನನಗೆ ಕಣ್ಣು ಹೊಡೆಯಿತು.
ಮತ್ತೇ ಅಂರ್ತಮುಖಿಯಾದೆ - "ಮೊದಲು ಈ ಕಾಲೇಜಿನ ಚರ್ಚೆಯಿಂದ ಹೊರಗೆ ಬರಬೇಕು. ಏನಾದ್ರು, ಅವಳಿಗೆ ಇಷ್ಟವಾಗುವ ವಿಷಯದ ಬಗ್ಗೆ ಮಾತು ಶುರು ಮಾಡಿದರೆ ಒಳ್ಳೆಯದಿರುತ್ತೆ"
ಅವಳು ಆ ಗಣಿತಶಾಸ್ತ್ರದ ಬಗ್ಗೆಯೇ ಮಾತಾಡುತಿದ್ದಳು. ಅವಳ ಕಣ್ಣು ಆ ಮೇಣದ ದೀಪದಲ್ಲೇ ನೆಟ್ಟಿತ್ತು. ಅದೇನೋ ಯೋಚಿಸುತ್ತಿದ್ದಳೆನಿಸುತ್ತೆ."ಇರಲಿ ಬಿಡು ಶೃತಿ, ಹೇಗಾದರೂ ಮಾಡಬಹುದು. ನಿನಗಷ್ಟೇ ಕಷ್ಟವಾದರೆ, ನಾನೇ ಹೇಳಿಕೊಡ್ತೆನಿ"
ಗಡಿಯಾರ ನೋಡಿ ನಾನೇ ಹೇಳಿದೆ - "ಗಂಟೇ ೭.೩೦ಯಾಯಿತು"
ಆ ಗಡಿಯಾರದ ಕೆಳಗಿದ್ದ ಶೋಕೇಸ್‍ಲ್ಲಿ, ಅವಳು ಕ್ರೀಡೆಯಲ್ಲಿ ಗೆದ್ದ ಪದಕಗಳು, ಕಪ್ಪುಗಳ ಸಾಲೇ ಇತ್ತು.
"ನಿನಗೆ ಕ್ರೀಡೆಗಳಲ್ಲಿ ಆಸಕ್ತಿ ಇದೆಯಂತಾ ಗೊತ್ತಿತ್ತು. ಆದರೆ, ಇಷ್ಟೊಂದು ಬಹುಮಾನಗಳನ್ನು ನೀನು ಗೆದ್ದಿದ್ದೀಯಾ ಅಂತ ಗೊತ್ತಿರಲ್ಲಿಲ್ಲ"
"ಅವೆಲ್ಲಾ, ಹೈಸ್ಕೂಲ್‍ನಿಂದ ಗೆಲ್ಲುತ್ತಾ ಬಂದಿದ್ದು""ಕೊನೆಯ ಬಾರಿಯ ಸ್ಪೋಟ್ಸ್ ಡೇಯಲ್ಲಿ ನೀನು ಆ ೪*೧೦೦ ಮೀ. ರೀಲೆಯಲ್ಲಿ ನಿಮ್ಮ ಟೀಮ್‍ನ್ನಾ ಗೆಲ್ಲಿಸಿದ್ದು ನನಗೆ ಚೆನ್ನಾಗಿ ನೆನಪಿದೆ"
"ಹೌದು, ಅದೊಂದು ನಾನೇಂದು ಮರೆಯದ ಸ್ಪರ್ಧೆ ಕಿರಣ್"
"ನೀನು ಅಂದು ಓಡಿದ್ದು...ಅಬ್ಬಾ...ಅದೇನು ಓಟ...ಚಿರತೆಯನ್ನೇ ಮೀರಿಸುವಂತ್ತಿತ್ತು. ಕೊನೆಯ ಸುತ್ತಿನಲ್ಲಿ ನಿಂತಿದ್ದ ನಿನ್ನ ಕೈಗೆ ಆ ಬ್ಯಾಟನ್ ಬಂದಾಗ, ಬೇರೆ ತಂಡದ ಓಟಗಾರತಿಯರೆಲ್ಲಾ ಮುಂದೆ ಹೋಗಿ ಬಿಟ್ಟಿದ್ದರು. ನೀನು ಕೊನೆಗಿದ್ದೆ. ನೀನು ಓಡೋಕೆ ಶುರು ಮಾಡಿದ ಮೇಲೆ ನೋಡು, ಒಬ್ಬೊಬ್ಬರಾಗಿ ಎಲ್ಲರೂ ಹಿಂದೆ ಬೀಳತೊಡಗಿದರು. ನೀನು ಹೋಗಿ ಕ್ರೀಸ್ ಮುಟ್ಟಿದಾಗ, ನಿನ್ನ ಹಿಂದೆ ಇದ್ದ ೨ನೇ ಸ್ಪರ್ಧೆ ಇನ್ನೂ ೧ಮೀ. ದೂರವಿದ್ದಳು""ನಿನಗೆ ವಿಶ್ ಮಾಡೋಣಾ ಅಂತಾ ಅಲ್ಲಿಗೆ ಬಂದೆ. ಆದರೆ, ಅಲ್ಲಿ ಹುಡುಗಿಯರೇ ಇದ್ದರು. ನನಗೆ ಸಂಕೋಚವಾಗಿ ವಾಪಾಸ್ ಬಂದುಬಿಟ್ಟೆ"
"ಎಷ್ಟೊಂದು ಸಲ, ನೀನು ಓಟದ ಸ್ಪರ್ಧೆಗಳಲ್ಲಿದ್ದಾಗ ನಾನು ಮೈದಾನದಲ್ಲೇ ಇರುತ್ತಿದ್ದೆ. ಅಕ್ಕ-ಪಕ್ಕ ನನಗೆ ಪರಿಚಯದವರು ಯಾರು ಇರಲಿಲ್ಲ ಅಂದರೇ, ನಾನು ಜೋರಾಗಿ - ಓಡು ಶೃತಿ ಓಡು - ಅಂತಾ ಕೂಗ್ತಾ ಇದ್ದೆ. 'ಗುಂಪಲ್ಲಿ ಗೋವಿಂದ' ಅನ್ನೋ ಹಾಗೇ"

ಅವಳು ನಕ್ಕಳು. ಕೆಲ ಕ್ಷಣಗಳು, ಆ ತಿಳಿ ನಗೆ ಅವಳ ಮುಖದ ಮೇಲೆ ಹಾಗೆಯೇ ಉಳಿದಿತ್ತು -
ಗುಳಿಬಿದ್ದ ಕೆನ್ನೆಗಳು
ತುಟಿಯ ಸನಿಹದೀ ನಗುಗುಳಿಬಿದ್ದ ಕೆನ್ನೆಗಳು
ಕಣ್ಣಂಚಲಿ ಕುಳಿತ ಕಾಡಿಗೆ
ಮುಂಗುರುಳ ಉಯ್ಯಾಲೆಈ ಸಿಂಗಾರಿಯ ನೋಟವ
ನೋಡುತಲಿರುವ ನನ ಕಣ್ಣನಾನೇಕೆ ಪಿಳುಕಿಸಲಿ?
ಅದೇಗೆ ನಿನ್ನಿಂದ ಸರಿಸಲಿ?ನಮ್ಮಿಬ್ಬರ ಮಧ್ಯೆ ಮಾತಿನ ಹೊಳೆ ಹರಿಯುತ್ತಿತ್ತು. ಕ್ರೀಡೆಯಲ್ಲಿಯ ಅವಳ ಆಸಕ್ತಿ, ಅವಳ ನಿರಂತರ ಗೆಲುವುಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇತ್ತು. ಕೆಲವು ಅತಿ ಕಠಿಣ ಸ್ಪರ್ಧೆಗಳಲ್ಲಿ ಅವಳು ಗೆದ್ದಿದ್ದು, ಕೆಲವೊಮ್ಮೆ ಸೋತಾಗ ಅತ್ತದ್ದು...ಎಲ್ಲವನ್ನು ವಿವರಿಸುತ್ತಾ ಅವಳು ಅದೆಷ್ಟು ತನ್ಮಯಳಾಗಿ ಮಾತಾಡುತ್ತಿದ್ದಳು.
- ೩ -
ಎಲ್ಲೊ ಒಂದು ಕಡೆ, ನಮ್ಮಿಬ್ಬರ ಮಾತುಗಳ ಮಧ್ಯದಲ್ಲಿ, ಮತ್ತೇ ನನ್ನೊಳಗಿನ ಧ್ವನಿ ಮಾತಾಡತೊಡಗಿತು -"ಕಾಲೇಜು ವಿಷಯದಿಂದ ಹೊರಗೆ ಬಂದು, ಅವಳಿಗೆ ಇಷ್ಟವಿರುವ ವಿಷಯದ ಬಗ್ಗೆ ಮಾತಾಡಿದ್ದು ಆಯಿತು. ಈಗಾ ವಿಷಯಕ್ಕೆ ಬರಲಿ ಅಲ್ಲವಾ? ನಮ್ಮಿಬ್ಬರಲ್ಲಿ ಅಷ್ಟು ಗಾಢವಾದ ಸ್ನೇಹವಿಲ್ಲದಿದ್ದರೇನಂತೇ? ಒಳ್ಳೆಯ ಪರಿಚಯವಿದೆಯಲ್ಲಾ? ಅವಳು ನನ್ನೊಂದಿಗೆ, ಇಷ್ಟೊತ್ತು ಕೂತು ಮಾತಾಡುತ್ತಿದ್ದಾಳೆಂದರೇ, ಅವಳಿಗೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಬಹುದು, ಅವಳೂ ನನ್ನ ಇಷ್ಟ ಪಡುತ್ತಿರಬಹುದು. ಆಯ್ತು ಹಾಗಿದ್ರೆ. ಕೊನೆಪಕ್ಷ ಅವಳಿಗೇ ನನ್ನ ಭಾವನೆಗಳ ಸುಳಿವಾದರು ಕೊಡೋಣ. ಕಥೆಗೆ ಕ್ಲೈಮ್ಯಾಕ್ಸ್ ತೆರೆ ಎಳೆದೇ ಬಿಡ್ತೀನಿ"ಹಾಗೆಂದುಕೊಂಡವನೇ, ಮೊದಲು ನಮ್ಮಿಬ್ಬರಲ್ಲಿ ನಡೆಯುತ್ತಿದ್ದ ಸಂಭಾಷಣೆಯ ವಿಷಯಕ್ಕೆ ಅಂತ್ಯ ಹಾಡಿದೆ.
"ಶೃತಿ, ನೀರಡಿಕೆಯಾಗ್ತಿದೆ. ಒಂದು ಲೋಟ ನೀರು ತರುತ್ತಿಯಾ?"
"ಹಾ, ತರ್ತೀನಿ" ಎದ್ದು ಒಳಗೆ ನಡೆದಳು.
"ಎಷ್ಟೊ ಸಲ ಒಬ್ಬನೇ ಇದ್ದಾಗ ಅವಳನ್ನ ನೆನಪಿಸಿಕೊಳ್ಳೊದು, ಅವಳು ಕಾಲೇಜಿಗೆ ಯಾವಾಗ ಬರ್ತಾಳೊ ಅಂತಾ ನಾನು ದಿನಗಳನ್ನ ಕಳಿತಿರೋದು ಎಲ್ಲಾ ಹೇಳೇಬಿಡೋಣ..."
"ಎಷ್ಟೊ ಸಲ ಒಬ್ಬನೇ ಇದ್ದಾಗ ಅವಳನ್ನ ನೆನಪಿಸಿಕೊಳ್ಳೊದು, ಅವಳು ಕಾಲೇಜಿಗೆ ಯಾವಾಗ ಬರ್ತಾಳೊ ಅಂತಾ ನಾನು ದಿನಗಳನ್ನ ಕಳಿತಿರೋದು ಎಲ್ಲಾ ಹೇಳೇಬಿಡೋಣ..."
"ತಗೋ..." ಲೋಟ ಕೈಗಿತ್ತಳು.
ಲೋಟವನ್ನು ಅವಳ ಕೈಯಿಂದ ತೆಗೊಂಡೆ.
ನೀರನ್ನು ಗಟ-ಗಟನೇ ಕುಡಿದು, ಟೇಬಲ್ ಮೇಲಿಟ್ಟೇ."ಇನ್ನೂ ಬೇಕಾ?"
"ಇಲ್ಲಾ...ಇಲ್ಲ...ಸಾಕು" ಕರವಸ್ತ್ರದಿಂದ ಬಾಯನ್ನು ಒರೆಸಿಕೊಂಡೆ.ಅವಳು ಮತ್ತೇ ತನ್ನ ಜಾಗದಲ್ಲೇ ಕುಳಿತಳು.
"ನಾನು ನಿನಗೊಂದು ವಿಷಯ ಹೇಳ..."ಗೋಡೆ ಗಡಿಯಾರ "ಢಣ್...", "ಢಣ್...","ಢಣ್..." ಅಂತಾ ತನ್ನ ಕರ್ತವ್ಯಕ್ಕೆ ಕೈಹಾಕಿತು.
ಅವಳೂ ಹಿಂದಿರುಗಿ ಅದರ ಕಡೆಗೆ ನೋಡಿದಳು.ಆ ಗಡಿಯಾರದ ೮ನೇ "ಢಣ್..." ಇನ್ನೂ ಮುಗಿದಿರಲಿಲ್ಲ, ಫ್ಯಾನ್ ತಿರುಗತೊಡಗಿತು.
"ಕರೇಂಟ್ ಬಂತು ಅನಿಸುತ್ತೆ ಶೃತಿ"
"ಕರೇಂಟ್ ಬಂತು ಅನಿಸುತ್ತೆ ಶೃತಿ"
ಟ್ಯೂಬ್ ಲೈಟ್ ಪಕ್-ಪಕ್ ಅಂತಾ ಸಪ್ಪಳ ಮಾಡುತ್ತಾ ಆನ್ ಆಯಿತು. ನಾನು ತಲೆ ಬಗ್ಗಿಸಿ ಕಣ್ಣು ಮುಚ್ಚಿಕೊಂಡೆ. ಮೆಲ್ಲಗೆ ಕಣ್ಣು ತೆರೆದೆ. ಅವಳು ಕಣ್ಣು ಸಣ್ಣದಾಗಿ ಮಾಡಿ, ಕೈಗಳನ್ನು ತನ್ನ ಕಣ್ಣಿಗೆ ಹಿಡಿದಿದ್ದಳು.
"ನೀನು ಏನೋ ಹೇಳ್ತಾಯಿದ್ದೆ ಕಿರಣ್"
"ಅದೇ...ನೀನು ಕಾಲೇಜಿಗೆ ಯಾವಾಗಿನಿಂದ ಬರ್ತೀದಿಯಾ?""ಜುಲೈ ೧೦ರಿಂದ. ಆವತ್ತೇ ಫಸ್ಟ ಡೇ. ಯಾಕೇ?"
"ಶೃತಿ, ನೀನು ಬರೋ ತನಕ..."ಯಾರೊ ಗೇಟ್ ತೆಗೆದ ಶಬ್ದ. ಕಿಟಕಿ ತೆಗೆದದ್ದೆಯಿತ್ತು. ಪಕ್ಕದ ಮನೆಯವರು ಇರಬಹುದು ಅನ್ನಕೊಂಡೆ. ಅವಳು ಕಿಟಕಿಯ ಕಡೆಗೆನೂ ನೋಡಲಿಲ್ಲ. "ಟರ್...", "ಟರ್..." ಕಾಲಿಂಗ್ ಬೆಲ್ ಹೊಡಕೊಳ್ತು. ನಾನು ಬಾಗಿಲ ಬಳಿ ನೋಡಿದೆ.ಶೃತಿ ಎದ್ದು ಹೋಗಿ ಬಾಗಿಲು ತೆರೆದಳು.
"ಮಮ್ಮಿ...."
ಬಂದದ್ದು ನನ್ನ ( ಅಂತಾ ನಾನು ಅಂದುಕೊಂಡ ) ಭಾವೀ ಅತ್ತೆ-ನಾದಿನಿ! ಕೈತುಂಬಾ ಶಾಪಿಂಗ್ ಲಗೇಜು.
"ನೀನು ಬೇಗ ಬಂದದ್ದು ಚೆನ್ನಾಗಾಯಿತು ಮಮ್ಮಿ. ನೋಡು ಕಿರಣ್ ಬಂದಿದ್ದಾನೆ" ಅಮ್ಮನ ಕೈಯಿಂದ ಕೆಲವು ಚೀಲಗಳನ್ನು ತೆಗೊಂಡು ನನ್ನ ಕಡೆ ಹೆಜ್ಜೆ ಇಟ್ಟಳು.
ಕೃತಕವಾಗಿ ನಗುತ್ತಾ -"ಚೆನ್ನಾಗಿದೀರಾ ಆಂಟಿ?""ಹ್ಹುನಪ್ಪಾ, ನಾನು ಚೆನ್ನಾಗಿದೀನಿ. ನೀನು ಹೇಗಿದೀಯಾ?"
"ಚೆನ್ನಾಗಿದಿನಿ ಆಂಟಿ..." ಮುಂದುವರೆದವು, ಉಭಯ-ಕುಶಲೋಪಚಾರದ ಮಾತುಗಳು.
"ಆಯ್ತು, ನಾನಿನ್ನು ಹೋರಡ್ತೀನಿ"
"ಊಟ ಎಲ್ಲ ಬೇಡ ಆಂಟಿ. ಮತ್ತೊಮ್ಮೆ ಯಾವಾಗಲಾದರು ಬರ್ತೀನಿ"
"ಪರವಾಗಿಲ್ಲ ಕೂತ್ಕೋಳೋ. ಇವತ್ತು ಇಲ್ಲೇ ಡಿನ್ನರ್ ಮಾಡು""ಬೇಡ ಕಣೇ"
"ಹೇ, ಅಮ್ಮ ಬರೋಕೆ ಮುಂಚೆ ನೀನು ಏನೊ ಹೇಳ್ತಿದೇ ಕಿರಣ್. ಅದೇ ನಾನು ಕಾಲೇಜಿಗೆ ಬರೋ ತನಕ...ಅಂತಾ""ಓ...ಹೌದಲಾ!... ಛೇ! ಮರತು ಹೋಯ್ತು. ನೆನಪಾದರೆ ಹೇಳ್ತೀನಿ ಬಿಡು"
"ಆಯ್ತು ಹಾಗಿದ್ರೆ. ಮತ್ತೆ ಬರತಿರು""ಓಕೆ, ಹೋಗಿಬರ್ತೀನಿ ಆಂಟಿ. ಬಾಯ್ ಶೃತಿ"
"ಬಾಯ್..."ಚಪ್ಪಲ ಹಾಕಿಕೊಂಡು ಹೊರಗೆ ಬಂದೆ. ಶೃತಿ ಕೂಡ ನನ್ನ ಹಿಂದೆ ಬಂದಳು. ನಾನು ಗೇಟ್ ತೆರೆದು ಹೊರಗೆ ಹೋದೆ. ಅವಳು ಅಲ್ಲೇ ನಿಂತಿದ್ದಳು.
"ಕಾಲೇಜಲ್ಲಿ ಸಿಗೋಣ. ಬಾಯ್..."
"ಬಾಯ್..."ತಲೆ ತಗಿಸಿಕೊಂಡು ನಡಿತಾ ಹೊರಟೆ. ಸ್ವಲ್ಪ ದೂರ ನಡೆದ್ದಿದೆ. ಒಂದು ಆಟೋ, ನನ್ನ ಪಕ್ಕದಿಂದನೇ ಹೋಯ್ತು. ಅವನು ಹಚ್ಚಿದ ರೇಡಿಯೋದಲ್ಲಿ -"ಯಾರೋ...ಯಾರೋ...ಗೀಚಿಹೋದ ಹಾಳು ಹಣೆಯ ಬರಹ..." ಹಾಡು ಬರುತ್ತಿತ್ತು. ಅಳಸಿ ಬೇರೆದ್ದನ್ನು ಬರಿಬೇಕೆಂದರೇ ನನ್ನ ಹತ್ತಿರ ರಬ್ಬರ್ ಅಂದು ಇರಲಿಲ್ಲ, ಇಂದು ಇಲ್ಲ.
ನನ್ನ ಜೀವನದ ಪುಟಗಳಲ್ಲಿ ಬಂದು ಹೋಯಿತು - ಹೀಗೊಂದು ಸಂಜೆ.

Sunday, July 5, 2009
ಕಥೆ-ವ್ಯಥೆ-ನನ್ನ ಸ್ನೇಹಿತೆ
ಇಂಜಿನಯರಿಂಗ್‍ನ ಕೊನೆಯ ವರ್ಷ. ಲ್ಯಾಬ್ ಮುಗಿಸಿಕೊಂಡು ರೂಮ್ ಕಡೆಗೆ ಹೋಗುತ್ತಿದ್ದೆ. ಮಧ್ಯಾಹ್ನವಾಗಿತ್ತು, ಊಟದ ಸಮಯ. ಕಾಲೇಜ್ ಕ್ಯಾಂಪಸ್‍ನಲ್ಲಿ ಎಷ್ಟೊ ಹುಡುಗ-ಹುಡುಗಿಯರು. ಆದರೆ ಕಣ್ಣಿಗೆ ಬೀಳೋದು, ಹುಡುಗಿಯರು ಮಾತ್ರ. ಆ ವಯಸ್ಸಿನ ಲಕ್ಷಣಗಳಲ್ಲಿ ಇದೊಂದು. ಉದ್ದನೆಯ ಜಡೆ, ಜೀನ್ಸ್ ಪ್ಯಾಂಟ್-ಟೀ ಶರ್ಟ್ ಹಾಕಿಕೊಂಡಿದ್ದ ಅವಳು ಕ್ಲಾಸ್ ಮುಗಿಸಿಕೊಂಡು ಮನೆಗೆ ಹೊರಟಿದ್ದಳು. ಮೊಟ್ಟ ಮೊದಲ ಸಲ ಅವಳನ್ನು ನೋಡಿದ್ದೆ ಅವತ್ತು. ಕಣ್ಣಿನಿಂದ ಮರೆಯಾಗುವವರೆಗೂ ಅವಳನ್ನೇ ನೋಡುತ್ತಿದ್ದೆ -
ನಿನ ಹೆಜ್ಜೆಗೆ ಸನಿಹ
ನಾನಿಲ್ಲೆ ಬರುತಿದ್ದೆ
ನನ್ನೆಡೆಗೆ ನೋಡಬಾರದೆ
ನಗುಮುಖದ ಚೆಲುವೆ
ಅಂತ ಅನ್ನುತ್ತಾ ರೂಮ್ ಕಡೆಗೆ ನಡೆದೆ. ಅಂದಿನಿಂದ, ಕ್ಯಾಂಟೀನ್, ಗುಡಿ, ಲ್ಯಾಬ್, ಜೆರಾಕ್ಸ್ ಹೀಗೆ ಕ್ಯಾಂಪಸ್‍ನಲ್ಲಿ ಎಲ್ಲಿ ಹೋದರು, ಅವಳೆಲ್ಲಾದರು ಕಾಣಿಸುತ್ತಾಳೆನೊ ಅಂತಾ ನೋಡುತಿದ್ದೆ. ಆಗಾಗ ಸಾಯಂಕಾಲ ಬಾಸ್ಕೆಟ್ ಬಾಲ್ ಮೈದಾನದಲ್ಲಿ, ಮಧ್ಯಾಹ್ನ ಅವಳ ಡಿಪಾರ್ಟ್‌ಮೆಂಟಿನ ಬಳಿ, ಕಾಲೇಜಿನ ಮುಖ್ಯದ್ವಾರದ ಹತ್ತಿರ ಅವಳ ಸ್ಕೂಟಿಯಲ್ಲಿ ಕಾಣಿಸುತಿದ್ದಳು. ಹೇಗಾದರೂ ಮಾಡಿ ಪರಿಚಯ ಮಾಡಿಕೊಳ್ಳೊಣಾ ಅಂತ ಅನಿಸುತಿತ್ತಾದರು, ನಾನಾಗಿಯೇ ಯಾವ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ದಿನಗಳು ಕಳೆದವು, ಪರಿಚಯಕ್ಕೆಂದು ಅವಕಾಶವೇ ಮೂಡಿ ಬರಲಿಲ್ಲ.
ಪ್ರತಿವರ್ಷದಂತೆ ಆ ವರ್ಷವೂ ಕಾಲೇಜ್ ಡೇ ಫಂಕ್ಶನ್‍ನ ಸಂಭ್ರಮ ಶುರುವಾಯಿತು. ಇದು ನಡೆಯುವುದು ೪-೫ ದಿನಗಳು.ಒಂದೊಂದು ದಿನ ಒಂದೊಂದು ರೀತಿಯ ಮನೋರಂಜನೆಯ ಕಾರ್ಯಕ್ರಮಗಳು, ಸೃಜನಾತ್ಮಕ ಸ್ಪರ್ಧೆಗಳಿರುತ್ತವೆ.ಫಂಕ್ಶನ್‍ನ ಮೊದಲ ದಿನ. ಅಂದು ಸಂಜೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗಾಯನ ಕಾರ್ಯಕ್ರಮ ಇತ್ತು. ಗೆಳೆಯರೆಲ್ಲಾ ಮೈದಾನದಲ್ಲಿ ನಿಂತಾಗ ಸಿಳ್ಳೆ ಹೊಡೆಯುವುದು, "ಮಾರಿ ಕಣ್ಣು-ಹೊರಿ ಮ್ಯಾಗೆ" ಅಂತ ಹಾಡುಗಳಿಗೆ ತಾಳ ಹಾಕುವುದು, ಮೈದಾನದ ತುಂಬಾ ಹೀಗೆ ಗಜಿ-ಬಿಜಿ, ಗೊಜು-ಗದ್ದಲ, ಗೆಳೆಯರೊಂದಿಗೆ ಮಜವೊ-ಮಜ. ಆ ಸಂಜೆಯ ಗಾಯನ ಕಾರ್ಯಕ್ರಮದಲ್ಲಿ ಅವಳು ಭಾಗವಹಿಸಿದ್ದಳು. ಅಂದು ಅವಳು ಹಾಡಿದ್ದು "ತುಂತುರು ಅಲ್ಲಿ ನೀರ ಹಾಡು...ಕಂಪನ ಇಲ್ಲಿ ಪ್ರೀತಿ ಹಾಡು..."; ಅದ್ಬುತ ಕಂಠ. ಗಜಿ-ಬಿಜಿ ಅಂತಿದ್ದ ಮೈದಾನ ಆ ಹಾಡು ಮುಗಿಯುವವರೆಗೆ ನಿಶ್ಬದ್ಧವಾಗಿ ಹೋಯಿತು. ನಿಂತಲ್ಲೇ ತಲ್ಲೀನನಾಗಿ ಕೇಳಿದೆ-ನೋಡಿದೆ. ಬಹುಶಃ ಅದೇ ಕ್ಷಣವನಿಸುತ್ತೆ, ಅವಳಿಗೆ ಸ್ವಲ್ಪ ಬಿದ್ದೆ ಕೂಡ. ಯಾವತ್ತೂ ಕೇಳಿರದ ಆ ಹಾಡನ್ನು, ನಂತರದ ೪-೫ ದಿನ, ಪದೇ-ಪದೇ ಕೇಳಿಬಿಟ್ಟೆ. ಆ ವಿಶ್ವ - "ಲೇ, ಎಷ್ಟು ಸಲ ಕೇಳುತಿಯಲೇ ಕಿರಣ" ಅಂತಾ ಬೈದ.
ಅವತ್ತು ನನ್ನ ಡೈರಿಯಲ್ಲಿ ಬರೆದಿದ್ದೆ -
ಏ ಮೈಸೂರ ಹುಡುಗಿ
ನನ್ನ ಭವಿಷ್ಯವಾಣಿಯಲ್ಲಿ
ಸದಾ ನಿನ್ನ ವಾಣಿ ಇರಲಿ
ಮರುದಿನ, ಸುಮಾರು ಹನ್ನೊಂದು ಗಂಟೆಗೆ ಗೆಳೆಯರೊಂದಿಗೆ ಕಾಲೇಜ್‍ಗೇ ಹೋದೆ. ಕೊನೆಗೂ ನಾ ಪರಿಚಯಕ್ಕಾಗಿ ಕಾಯುತ್ತಿದ್ದ ದಿನ ಬಂದೆ ಬಿಟ್ಟಿತು. ಆಲ್ಲಿಗೆ ಹೋದಾಗ ಅವತ್ತು "ಫ್ರೆಂಡ್‍ಶಿಪ್ ಡೇ" ಆಚರಣೆಯಿದೆ ಅಂತಾ ಗೊತ್ತಾಯಿತು. ಒಳ್ಳೆಯ ಮಹೂರ್ತ ಅಂತ, ಕೂಡಲೇ ಒಂದು ಹಳದಿ ಗುಲಾಬಿಯ ಜೊತೆ, ಕಾರ್ಡಿನಲ್ಲಿ -
ನಿನ್ನೆ ನಾ ಕೇಳಿದೆ
ನೀ ಹಾಡಿದ ತುಂತುರು
ತುಂಬಿತ್ತು ಅದರಲ್ಲಿ

ಸ,ರಿ,ಗ,ಮ,ಪ ಗಳ ವಿದ್ವತ್ತು
ಸಂಗೀತ ನಿನ್ನ ಮೆರಗು
ನಾ ಕೇಳುಗನಿಗೆ ಅದೇ ವರವು
ಆಗುವೆಯಾ ನನ ಗಳತಿ
ಓ ಸಂಗೀತದ ಒಡತಿ
ಎಂದು ಬರೆದು, ನನಗೆ ಪರಿಚಯವಿದ್ದ ಹುಡುಗಿಯೊಬ್ಬಳಿಂದ ಕೊಟ್ಟು ಕಳಿಸಿದೆ. ಕೆಲ ಕ್ಷಣಗಳ ಕಾಲ, ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೊ ಅನ್ನೊ ಆತಂಕ ಆವರಿಸಿತು. ಹಾಗೇನೂ ಆಗಲಿಲ್ಲ. ನಾನು ಯಾರು ಅಂತಾ ಅವಳಿಗೆ ತಿಳಿದಿರಲಿಲ್ಲವಾದರೂ, ಅವಳು ಸಂತೋಷದಿಂದ ನನ್ನ ಗೆಳೆತನದ ಪತ್ರವನ್ನು ಸ್ವೀಕರಿಸಿದಳು.ನಾನು ಇ-ಮೇಲ್ ಐಡಿ ಕೇಳಿದ್ದರಿಂದ ಅದನ್ನು ಕೊಟ್ಟು ಕಳಿಸಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿ ನೋಡಿದಳಾದರು, ಇವನೇ ಅಂತಾ ಗೊತ್ತಿಡಿಯೊಕೆ ಹೇಗೆ ಆಗೂತ್ತೆ! ಅಲ್ಲಿ ನಡೆದಿದ್ದ ಬೇರೆ ಕಾರ್ಯಕ್ರಮಗಳನ್ನು ನೋಡಿ, ಬೇರೆ-ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆದರೆ ನನ್ನ ಮನಸ್ಸೆಲ್ಲಾ ಅವಳು, ಆ ಕಾರ್ಡ್, ಆ ಗುಲಾಬಿಗಳಿಂದಲೇ ತುಂಬಿ ಹೋಗಿತ್ತು. ಅವತ್ತಿನಿಂದ, ನನಗವಳು - ಮುಖ ಪರಿಚಯ, ನಾನವಳಿಗೆ - ಮುಖ ಕಾಣದ ಪರಿಚಯ. ನನ್ನಗೊಂದು ರೀತಿಯ ಸಂತೋಷ.
ಕಾಲೇಜ್ ಡೇ ಫಂಕ್ಶನ್ ಮುಗಿಯಿತು. ಮತ್ತೆ ಕ್ಲಾಸ್‍ಗಳು ಶುರುವಾದವು. ಜೊತೆಗೆ, ನನ್ನ ಗಮನ ಪ್ರೊಜೆಕ್ಟ್ ಕೆಲಸದ ಕಡೆಗೆ ಹರಿಯಿತು. ನನಗೆ ಆ ಸಮಯದಲ್ಲಿ ನನ್ನ ಕೊರ್ಸ್ ಮುಗಿಸುವುದೊಂದೆ ಪ್ರಥಮ ಆದ್ಯತೆಯಾಗಿತ್ತು. ಕೊನೆಯ ವರ್ಷವಾಗಿದ್ದರಿಂದ ಎಲ್ಲಾ ಸರಿಯಾಗಿ ಮುಗಿಸಿಕೊಂಡುಕೊಂಡು ಹೋಗುವ ಜವಾಬ್ದಾರಿ ಹೆಗಲ ಮೇಲೆ ಇತ್ತು. ದಿನಗಳು ಹಾಗೇ ಉರುಳಿದವು. ನನಗವಳ ಇ-ಮೇಲ್ ಐಡಿ ಗೊತ್ತಿದ್ದರಿಂದ ಮೇಲ್‍ನಲ್ಲೆ ಆಗಾಗ ಮಾತುಕತೆಯಾಗುತ್ತಿತ್ತು. ಕೊನೆಯ ಸೆಮಿಸ್ಟರಿನ ಪರೀಕ್ಷೆಗಳು ಬೀಳ್ಕೊಡುಗೆಯ ಆಲಿಂಗನ ಕೊಡಲು ಬಂದವು. ನನಗವಳ ಫೋನ್ ನಂಬರ್ ಗೊತ್ತಿರಲ್ಲಿಲ್ಲ. ಅವಳ ತರಗತಿಯ ಗೆಳಯನ್ನೊಬ್ಬನಿಗೆ, ನಾನು ಅವಳನ್ನು ಭೇಟಿಯಾಗುವ ಅವಶ್ಯಕತೆಯಿದೆ ಎಂದು ತಿಳಿಸಿದೆ. ಸಹಜವಾಗಿ ಅವನು ಅಪರಿಚಿತನೊಬ್ಬನಿಗೆ ಫೊನ್ ನಂಬರ್ ಕೊಡಲು ನಿರಾಕರಿಸಿದ. ಆದರೆ, ಅವಳಿಗೆ ಫೊನ್ ಮಾಡಿ ಮಾತಾಡಿಸಲು ಒಪ್ಪಿ, ಫೋನ್ ಮಾಡಿ ರಿಸಿವರ್ ನನ್ನ ಕೈಯಲ್ಲಿತ್ತ. "ಹೇ, ಪರೀಕ್ಷೇಗಳು ಮುಗಿಯುತ್ತಿವೆ. ಮುಗಿದ ನಂತರ ನಾನು ಊರಿಗೆ ಹೊರಟು ಹೋಗುತ್ತೇನೆ. ನನ್ನ ಹತ್ತಿರ ನಿನ್ನ ಫೊನ್ ನಂಬರ್ ಇಲ್ಲಾ. ಅದಕ್ಕೆ, ಬೇಕಿತ್ತು" ಅಂದೆ. "ಆಯ್ತು, ಅವನ ಹತ್ತಿರ ಇಸ್ಕೊ" ಅಂತ ಹೇಳಬಹುದೇನೋ ಅಂತಾ ಅಂದುಕೊಂಡಿದ್ದೆ. ಅವಳು - "ಬರೆದು ಕೊ ಹೇಳುತೀನಿ" ಅಂದಳು. ಖುಶಿ ಆಯಿತು. ನಂಬರ್ ಬರೆದುಕೊಂಡು "ಸಾಧ್ಯವಾದರೇ ಸಿಗುತ್ತೇನೆ" ಅಂತಾ ಹೇಳಿ ರಿಸೀವರ್ ಇಟ್ಟೆ.
ಕೊನೆಯ ಸೆಮಿಸ್ಟರ್‍ನ ಕೊನೆಯ ಪರೀಕ್ಷೆ.ಅದಾದ ನಂತರ, ೨ ದಿನಗಳ ನಂತರ ಮರಳಿ ಗೂಡಿಗೆ, ಅಂದರೆ ಊರಿಗೆ, ಪ್ರಯಾಣ. ಅವಳನ್ನೆಂದು ಭೇಟಿನೇ ಆಗಿರಲಿಲ್ಲಾ. ಬರೀ ಫೋನ್‍ನಲ್ಲಿ ಮಾತಾಡಿದ್ದಷ್ಟೇ. ನಾನು ಇಂತವನೇ ಅಂತಾ ಅವಳಿಗೇ ಹೇಳಬೇಕೆನಿಸಿತು, ಅವಳು ಯಾವ ರೀತಿ ಅದಕ್ಕೆ ಸ್ಪಂದಿಸುತ್ತಾಳೆ ಅಂತಾ ನೋಡಬೇಕಿತ್ತು. ಒಂದೆಡೆ, ಪರೀಕ್ಷೆಗಳು ಮುಗಿಯುತಿದ್ದಿದ್ದ ನಿರಾಳತೆ. ಇನ್ನೊಂದೆಡೆ, ನಾ - ಸ್ವಲ್ಪ ಬಿದ್ದಿರುವ - ಹುಡುಗಿಯ ಎದುರು ಹೋಗಿ ನಿಲ್ಲುತ್ತಿರುವ ಮೊದಲ ಕ್ಷಣದ, ಮೊದಲ ಅನುಭವದ ಆತಂಕ, ಸಂತೋಷ, ಭಾವಪರವಶತೆ. ಅಂದು, ಪರೀಕ್ಷೆ ಮುಗಿದ ನಂತರ ಅವಳ ಡಿಪಾರ್ಟ್‌ಮೆಂಟಿನ ಪರೀಕ್ಷೆಯ ಹಾಲ್ ಕಡೆಗೆ ಹೆಜ್ಜೆ ಇಟ್ಟೆ. ನನಗವಳ ಮುಖ ಪರಿಚಯವಿತ್ತು. ಅವಳು ಹಾಲ್‍ನಿಂದ ಹೊರಗೆ ಬರುತ್ತಿದ್ದಳು. ಅವಳೆಡೇ ದಿಟ್ಟ ಹೆಜ್ಜೆ ಇಟ್ಟೆನಾದರು, ಮೊದಲ ಪರಿಚಯ ನೀಡುವುದರಲ್ಲಿ ಸ್ವಲ್ಪ ಕಷ್ಟವೇ ಪಟ್ಟೆ. ನಾನು ಅಂದುಕೊಂಡ ಹಾಗೇ ಅಂತಹ ಖಾಸ್ ಪ್ರತಿಕ್ರಿಯೆ ಏನು ಸಿಗಲಿಲ್ಲ. ಅವಳು ಸಹಜವಾಗಿ ನಗುಮುಖದಿ, ಪರಸ್ಪರ ಕುಶಲ-ಕ್ಷೇಮದ ಎರಡು ಮಾತಾಡಿ ಅಲ್‍ಬಿದಾ ಎಂದು ಹೊರಟಳು. ಮನಸ್ಸು -
ಗೆಳತಿ,
ನಿನ್ನ ಈ ಸುಂದರ ನಡೆ
ಬರಲಿ ನನ್ನಯ ಕಡೆ
ಅಂತ ನುಡಿಯುತ್ತಿತ್ತು. ಕಾಲೇಜು ಹಂತ ಮುಗಿಯಿತು. ಮರಳಿ ಊರಿಗೆ ಬಂದೆ. ಕ್ಯಾಂಪಸ್‍ನಲ್ಲಿ ನನಗೆ ಆಗಲೇ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಸೇರಲು ಇನ್ನೂ ಒಂದು ತಿಂಗಳ ಸಮಯವಿತ್ತು. ಆದರೆ, ದುರಾದೃಷ್ಟವಶಾತ್ ಅಮೇರಿಕಾದ ಅರ್ಥಿಕ ಹಿಂಜರಿತದಿಂದಾಗಿ ನನ್ನ ಕೆಲಸ ೮-೯ ತಿಂಗಳುಗಳವರೆಗೆ ಮುಂದೆ ಬಿತ್ತು. ಬೇರೆ ಕೆಲಸ ಹುಡುಕೋಣ ಎಂದು ಮೈಸೂರಿಗೆ ಮರಳಿ ಬಂದೆ. ನನ್ನ ಹಾಗೇ ಕೆಲಸ ಕಳೆದುಕೊಂಡ ನನ್ನ ಕೆಲವು ಗೆಳೆಯರು ಕೂಡ ಮೈಸೂರಿಗೆ ಬಂದಿದ್ದರು. ಅದೇ ತಿಂಗಳಿನಲ್ಲಿ ನಾನು ಓದಿದ ಕಾಲೇಜಿನಲ್ಲಿ ಒಂದು ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಅದರಲ್ಲಿ ಭಾಗವಹಿಸಿದೆ. ನನ್ನ ಅಚ್ಚರಿಗೆ, ಅದರಲ್ಲಿ ಅವಳೂ ಭಾಗವಹಿಸಿದ್ದಳು. ಆ ಕಾರ್ಯಕ್ರಮದ ಮೊದಲ ದಿನದಂದು ಹೊರಗೆ ಬಂದಾಗ ನಾನು-ಅವಳು ಜೊತೆಗೆ ಬಂದಿದ್ದೇವು. ಕೊನೆಯ ಪರೀಕ್ಷೇ ಮುಗಿದ ನಂತರ ಮಾತಾಡಿದ್ದು ಮತ್ತೆಂದೂ ಮಾತಾಡಿರಲಿಲ್ಲ, ಇ-ಮೇಲ್ ಕೂಡಾ ಮಾಡಿರಲಿಲ್ಲ. ಇಬ್ಬರಲ್ಲೂ ಒಂದು ರೀತಿಯ ಸಂಕೋಚ ತುಂಬಿಕೊಂಡಿತ್ತು. ಅಕ್ಕ-ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದರು, ಮಾತು ಬರುತ್ತಿರಲಿಲ್ಲ. ಕೊನೆಗೆ ನಾನೇ - "ಹಾಯ್" ಎಂದೇ. ಅಲ್ಲಿಂದ ಮಾತುಗಳು ಶುರುವಾದವು. ಆ ಒಂದೇ ದಿನದಲ್ಲಿ ನನಗವಳು ಎಷ್ಟೊ ಪರಿಚಯವಾಗಿಬಿಟ್ಟಳು. ಮೈಸೂರಿನಲ್ಲೇ ಉಳಿದ ಅದೇ ದಿನಗಳಲ್ಲಿ ಅವಳ ಸಂಗೀತ ಕಛೇರಿಗಳಿಗೆ ಹೋಗುತಿದ್ದೆ. ಕೆಲವೊಮ್ಮೆ ಮುಂಚೆಗೆ ಹೋಗಿ ಭೇಟಿಯಾಗುತಿದ್ದೆ. ಇದೆಲ್ಲಾ ಒಂದೇಡೆಯಾದರೇ, ನಾನು ಮೈಸೂರಿಗೆ ಕೆಲಸ ಹುಡುಕಲು ಬಂದಿದ್ದ ಉದ್ದೇಶ ಇನ್ನೊಂದೆಡೆ. ದಿನಗಳು ಕಳೆದವಾದರೂ, ನನಗೆ ಮೈಸೂರಿನಲ್ಲಿ ಕೆಲಸ ಸಿಗಲಿಲ್ಲ. ಮರಳಿ ನಮ್ಮ ಊರಿಗೆ ಬಂದೆ.
ನಮ್ಮೂರಲ್ಲಿ ೮-೯ ತಿಂಗಳುಗಳು ಕಳೆದವು. ಒಂದು ದಿನ ನನಗೆ ಕ್ಯಾಂಪಸ್‍ನಲ್ಲಿ ಕೆಲಸ ಸಿಕ್ಕಿದ್ದ ಕಂಪೆನಿಯಿಂದ ಕೆಲಸಕ್ಕೆ ಸೇರಲು ಪತ್ರ ಬಂತು. ಆಶ್ಚರ್ಯವೆನೇಂದರೇ, ನನ್ನ ಟ್ರೈನ್ನಿಂಗ್ ೨ ತಿಂಗಳಿಗಾಗಿ ಮತ್ತೆ ಮೈಸೂರಿನಲ್ಲಿ! ಇನ್ನೂ ಮೈಸೂರಿನ ಋಣ ಮುಗಿದಿರಲಿಲ್ಲವೆನಿಸಿತ್ತು. ಮೈಸೂರಿಗೆ ಬಂದು ಕೆಲಸಕ್ಕೆ ಸೇರಿದೆ. ಟ್ರೈನಿಂಗ್ ನಡೆದ ದಿವಸಗಳ ನಡುವೆ ಒಮ್ಮೆ ಅವಳಿಗೆ ಫೋನ್ ಮಾಡಿ ನನ್ನ ಬಗ್ಗೆ ತಿಳಿಸಿದೆ. ಅವಳಿಗೂ ನಾನು ಬಂದಿದ್ದು ಕೇಳಿ ಖುಶಿಯಾಗಿತ್ತು. ಊಟಕ್ಕೆ ಮನೆಗೆ ಬರಲು ಆಹ್ವಾನವಿತ್ತಳು. ಅವಳ ತಂದೆ ಕೆಲಸದ ಮೇರೆಗೆ ಊರಿಗೆ ಹೋಗಿದ್ದರು, ಅಮ್ಮಳ ಪರಿಚಯವಾಗಿತು. ಮನೆಯನ್ನು ತೋರಿಸುವಾಗ,ಎಲ್ಲೋ ಒಮ್ಮೆಮತ್ತದೇ "ತುಂತುರು" ಹಾಡಿಗೆ ಗುನು-ಗುನಿಸಿದ್ದಳು. ಅವು ಸಮ್ಮೋಹನಗೊಳಿಸುವಂತಹ ಸೆಕೆಂಡುಗಳೇ. ಅವಳೊಂದಿಗೆ ಊಟ ಮಾಡಿ ಹೊರಟು ನಿಂತಾಗ ಉಡುಗೊರೆಯೊಂದನ್ನು ಕೈಗಿತ್ತಳು.ಆ ರಾತ್ರಿ ಕಾಲೇಜಿನ ನೆನಪುಗಳೆಲ್ಲಾ ಮರುಕಳಿಸಿದವು.ಅವಳು ಕೊಟ್ಟ ಆ ಕೃಷ್ಣನ ಗೊಂಬೆ ತಲೆಯ ಹತ್ತಿರವೇ ಇಟ್ಟುಕೊಂಡು ಮಲಗಿದ್ದೆ. ಆಗ ಅನಿಸಿತ್ತು, ನನ್ನ ನಸೀಬ ನನ್ನನ್ನು ಮೈಸೂರಿಗೆ ಮತ್ತೆ ಯಾಕೆ ಕರೆ ತಂದಿತ್ತು ಅಂತಾ.
ಟ್ರೈನ್ನಿಂಗ್ ಮುಗಿದು, ಪುಣೆಗೆ ವರ್ಗಾವಣೆಯಾಯಿತು. ಇನ್ನೂ ಮೇಲಿಂದ ಕೆಲಸ ಶುರು. ಔದ್ಯೊಗಿಕ ಜವಾಬ್ದಾರಿಯನ್ನು ನಿಭಾಯಿಸಿಕೊಂಡಿದ್ದ ತೃಪ್ತಿ ನನ್ನಲಿ ಮೂಡ ತೊಡಗಿತು. ಪುಣೆ ತಲುಪಿ ಕೆಲ ದಿನಗಳ ನಂತರ, ನನ್ನ ಜೀವ ಇಷ್ಟು ಮಟ್ಟಿಗೆ ಇಷ್ಟ ಪಟ್ಟು, ಮೆಚ್ಚುಗೆಯಿಟ್ಟು, ಗೆಳೆತನ ಬೆಳೆಸಿಕೊಂಡ ಆ ಇನ್ನೊಂದು ಜೀವದ ಬಗ್ಗೆ ಯೋಚಿಸತೊಡಗಿತು. ನನ್ನ ಬಾಳ ಸಂಗಾತಿ ಇವಳಾಗಬಹುದೇ ಅನ್ನೊ ಪ್ರಶ್ನೆಗೆ, "ಹೌದು, ಆಗಬಹುದು" ಅನ್ನೊ ಉತ್ತರವನ್ನೇ ಹುಡುಕಿತು. ಉತ್ತರ ಸಿಕ್ಕಾಗ, "ಹೌದು, ಇದೇ ಸರಿ" ಅನ್ನೊದಕ್ಕೆ ಕಾರಣಗಳನ್ನು ಕೂಡಿ ಹಾಕಿತು. ಅವಳ ನೆನಪಿನಲ್ಲಿಯೇ ನನ್ನ ಮನಸ್ಸು ನುಡಿದಿತ್ತು -
ಆ ನಿನ್ನ ಉದ್ದದ ಜಡೆಯ
ಅಪ್ಪಳಿಸಿ ಕುಪ್ಪಳಿಸುತಿದೆ
ನಿನ್ನ ಚೆಲುವಿನ ನಡೆಯು
ಹಿಡಿದು-ಎಳೆದು ಅದನ
ಮುಡಿಸಿ ಮಲ್ಲಿಗೆಯ ಸಿಂಗರಿಸುವೆ
ಬಾ ಗೆಳತಿ
೨ ದಿನಗಳ ನಂತರ ಅವಳಿಗೆ ಫೋನ್ ಹಚ್ಚಿದೆ.ಕುಶಲ-ಕ್ಷೇಮದ ನಾಲ್ಕಾರೂ ಮಾತುಗಳಾಡಿದ ನಂತರ, ವಿಷಯಕ್ಕೆ ಬಂದೆ. ನಾನು ಅವಳ ಮೇಲೆ ಇಟ್ಟ ಜೀವ, ನನ್ನ ಭಾವನೆಗಳನ್ನು ತಿಳಿಸಿದೆ. ಎಲ್ಲವನ್ನು ಸಂಯಮದಿಂದ ಕೇಳಿದಳು. ನನ್ನ ಮಾತುಗಳು ಮುಗಿದ ನಂತರ, ಅವಳು ಮಾತಾಡತೊಡಗಿದಳು. ಅವಳಿಗೆ ತನ್ನ ಬಾಳ ಸಂಗಾತಿಯ ಬಗ್ಗೆ ಬೇರೆ ರೀತಿಯ ಆಯ್ಕೆ, ಅಭಿಪ್ರಾಯಗಳಿರುವುದು ಗೊತ್ತಾಯಿತು. ನೇರವಾಗಿ ಹೇಳಲಿಲ್ಲವಾದರು, ಅವಳ ಮಾತುಗಳಿಂದ ಗೊತ್ತಾಯಿತು. ನನಗೆ ತಿಳಿದ, ನಾನು ಓದಿದ, ಪ್ರೇಮಲೋಕದ ಇತಿಹಾಸ ಪುಟಗಳಲ್ಲಿ, ಹುಡುಗಿಯರು - ಹುಡುಗರನ್ನು ತಿರಸ್ಕ್ರರಿಸಿದಾಗ, ಬರುವ ಕೆಲವು ಮಾತುಗಳು ನನಗೂ ಕೇಳ ಸಿಕ್ಕವು - "ನಾನು ನಿನ್ನ ಈ ದೃಷ್ಟಿಯಿಂದ ನೋಡಿಯೇ ಇಲ್ಲ. ನೀನು ನನಗೊಬ್ಬ ಒಳ್ಳೆಯ ಗೆಳೆಯ" ಅಂತಾ. ಹೌದು, ಒಂದು ಮಾತ್ರ ಖಾತ್ರಿಯಿತ್ತು, ಆ ಮಾತುಗಳೇನೂ ಔಪಚಾರಕ್ಕಾಗಿ ಆಡಿರಲಿಲ್ಲ. ನಾನು ಅವಳಿಗೊಬ್ಬ ಒಳ್ಳೆಯ ಗೆಳೆಯನೇ ಆಗಿದ್ದೆ. ಫೋನ್ ಕೆಳಗಿಟ್ಟು, ಕಣ್ಣಲ್ಲಿ ನೀರನ್ನು ತುಂಬಿಕೊಂಡು, ಮನೆಯ ಕಡೆ ನಡೆದೆ. ಇನ್ನೂ ಬಾಳಿ ಬದುಕಬೇಕಾದ ಜೀವನ, ಆದರೆ, ಅದೇ ಜೀವನದಲ್ಲಿ ಅವಳಿಲ್ಲ. ನಡೆಯುವುದೆಲ್ಲಾ ಒಳ್ಳೆಯದಕ್ಕೆ, ಬಹುಶಃ ನನ್ನ ಪ್ರೇಮ ಚಿಗುರಲು, ನನ್ನ ವಿಧಿ ನನ್ನನ್ನು ಮರಳಿ ಮೈಸೂರಿಗೆ ಕರೆದ್ಯೊದಿತ್ತು ಅಂದು ಕೊಂಡಿದ್ದೆ. ಆದರೆ, ಅದರ ಬರಹದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು, "ಅವಳು-ನನಗಾಗಿ" ಯ ಬದಲು ಅದು "ಅವಳಲ್ಲಾ-ನನಗಾಗಿ" ಅಂತ ಅದು ಬರೆದಿತ್ತು. ಪುಣೆಯಲ್ಲಿ ನನಗಾಗ ಯಾರು ಆಪ್ತ ಸ್ನೇಹಿತರಿರಲಿಲ್ಲ. ಮನಸ್ಸು ಬಿಚ್ಚಿ, ಅತ್ತು ಕರೆದು ಮಾಡಿದರೆ ಸಮಾಧಾನ ಮಾಡುವ ನಲ್ಮೆಯ ಸಂಬಂಧಗಳಿನ್ನು ಮೂಡಿರಲಿಲ್ಲ. ಸಂಜೆಯವರೆಗೇ ಆಫೀಸಿನ ಕೆಲಸ, ರಾತ್ರಿ ರೂಂ ಮೇಟ್‍ಗಳ ಜೊತೆಗೆ ಹೊರಗೆ ಊಟ, ಇದೇ ದಿನಚರಿಯಲ್ಲಿ ಬಹಳ ದಿನಗಳವರೆಗೆ ಏಕಾಂಗಿಯಾಗಿಯೇ ಬದುಕು ಸಾಗಿತು. ಜೀವನದಲ್ಲಿ ಭಾವನೆಗಳಿರಬೇಕು, ಆದರೆ ಭಾವನೆಗಳೇ ಜೀವನವಾಗಬಾರದಂತೆ.ಆದರೆ, ಅದು ಯಾಕೊ, ನನಗೆ ಆಗ ಭಾವನೆಗಳೇ ಜೀವನವಾಗಿಬಿಟ್ಟಿದ್ದವು. ಪ್ರೀತಿ ಕಡಿದು ಹೋಗಿದ್ದರು, ಅವಳ ಜೊತೆಗಿನ ಸ್ನೇಹವನ್ನು ಹಾಗೇ ಉಳಿಸಿಕೊಂಡಿದ್ದೆ. ಕಾಲ ಕಳೆದಂತೆ, ಒಂದು ಅಪಾರ್ಥದಿಂದಾಗಿ, ಅದು ಕಳೆಗುಂದಿ ಮುರಿದುಹೋಯಿತು. ಋತುಗಳು ಉರುಳಿದವು. ಸಮಯ ಸಮವಾಗಿ ವ್ಯಯವಾಯಿತು. ಗಾಯ ತಾನಾಗಿಯೇ ಆಗತೊಡಗಿತು ಮಾಯ. ಆ ಖಿನ್ನ ಕ್ಷಣದ ನೆನಪುಗಳು ಮಾತ್ರ ನನ್ನೊಂದಿಗುಳಿದವು. ಖಿನ್ನತೆಯನ್ನ ಕಾಲ ಚಕ್ರ ಮಾಯವಾಗಿಸಿತು.
ಕೆಲದಿನಗಳ ಹಿಂದೆ ಮತ್ತೊಮ್ಮೆ ಅವಳ ಭೇಟಿಯಾಯಿತು. ನಮ್ಮಿಬ್ಬರ ನಡುವೆ ಮೂಡಿದ ಅಪಾರ್ಥದ ಬಗ್ಗೆಯೇ ಇಬ್ಬರೂ ಮಾತಾಡಿ, ಎಲ್ಲವನ್ನೂ ತಿಳಿಪಡಿಸಿಕೊಂಡೆವು. ಅವಳಿಗೂ ನನ್ನನ್ನೂ ಭೇಟಿಯಾದ್ದದ್ದು ಸಂತೋಷವಾಗಿತ್ತು. ತುಂಬಾ ಹೊತ್ತಿನವರೆಗೆ ಮಾತಾಡಿದೆವು. ನನಗವಳ ಬಗ್ಗೆ ಗೌರವ, ಆತ್ಮೀಯತೆ, ಪ್ರೀತಿ ಇಂದು ಇದೆ. ಅವಳಿಂದು ನನಗೊಬ್ಬ ಆತ್ಮೀಯ ಗೆಳತಿ. ನನಗೆ ತಿಳಿದ ಮಟ್ಟಿಗೆ ನಾನು ಅವಳ ಆತ್ಮೀಯ ಗೆಳೆಯ. ಅವಳು ಹೀಗೊಂದು ತಿರುವುಗಳ ನಡುವೆ ಬಂದ ಕಥೆ-ವ್ಯಥೆ-ನನ್ನ ಸ್ನೇಹಿತೆ.ಮೊನ್ನೆ ಅವಳ ಹುಟ್ಟು ಹಬ್ಬವಿತ್ತು. ವಿದೇಶದಲ್ಲಿರುವ ಅವಳಿಗೆ ಹೀಗೆ ಬರೆದು ಕಳಿಸಿದ್ದೆ -
ಗೆಳತಿ,
ಮರಳಿ ಬಂದ ಈ ಶುಭ ದಿನದ
ಹಾರ್ದಿಕ ಶುಭಾಶಯಗಳು
ಹೊಮ್ಮಲಿ-ಬೆಳೆಯಲಿ
ನಿನ್ನ ಸಂಗೀತದ ಪ್ರತಿಭೆ, ವರ್ಚಸ್ಸು
ಈಚೆಗೂ-ಸಾಗರದ ಆಚೆಗೂ
ಮಂದಸ್ಮಿತ ತುಂಬಿದ ನಿನ್ನ ಕಂಗಳು
ಹೀಗೆಯೇ ಅರಳಿರಲಿ,
ಇಂದಿಗೂ-ಬರುವ ನಾಳೆಗಳಿಗೂ
ಮತ್ತೊಮ್ಮೆ, ಶುಭಾಶಯ...ಶುಭಾಶಯ...

Monday, June 22, 2009
ಹುಲಿ ಬಂತು ಹುಲಿ
ಇಂಜಿನಯರಿಂಗ್‍ನ ಕೊನೆಯ ವರ್ಷ. ೭ನೇ ಸೆಮಿಸ್ಟರ್ ಆಗ ತಾನೇ ಶುರುವಾಗಿತ್ತು. ಜಾಸ್ತಿ ಓದು ಇಲ್ಲ. ಅವತ್ತು ರಾತ್ರಿ ೧ ಗಂಟೆಯಾಗಿತ್ತು. ಹಾಸ್ಟೆಲಿನ ಮಧ್ಯೆದಲ್ಲಿ ಸ್ವಲ್ಪ ಜಾಗವಿತ್ತು. ಎಲ್ಲರೂ ಅಲ್ಲೇ ಮಾತಾಡುತ್ತ ಕುಳಿತಿದ್ದೆವು. ಸಿನಿಮಾ-ಹುಡುಗಿ-ಕ್ರಿಕೆಟ್-ಕಾದಂಬರಿ-ಕಾಲೇಜಿನ ಡವ್ ಸ್ಟೋರಿಗಳು...ಹೀಗೆ ವಯಸ್ಸಿಗೆ ಬಂದ ೪-೫ ಜನ ಹುಡುಗರನ್ನು ಬಿಟ್ಟರೆ ಏನು ಮಾತಾಡ್ತಾರೊ ನಾವು ಅದನ್ನೇ ಮಾತಾಡುತ್ತಿದ್ದೆವು. ಕುಳಿತಲ್ಲಿಯೇ ಏನೇನೊ ಚರ್ಚೆಗಳು. ಹಾಗೇಯೇ ವಿಷಯ ಸುಮಾರು ೨-೩ ದಿವಸಗಳ ಹಿಂದೆ ನಮ್ಮ ಜೆ.ಸಿ.ಇ. ಕ್ಯಾಂಪಸ್‍ಗೆ ಹುಲಿಯೊಂದು ನುಗ್ಗಿರುವ ಸುದ್ದಿ ಕಡೆಗೆ ಹರೆಯಿತು.ಕ್ಯಾಂಪಸ್‍ನ ಮೂಲೆಯೊಂದರಲ್ಲಿ ಒಬ್ಬ ಪೇದೆಯನ್ನು, ಹುಲಿಯನ್ನು ಹಿಡಿಯಲು ಪಂಜರವನ್ನು ಇಟ್ಟಿದ್ದಾರೆಂದು ಗೊತ್ತಾಯಿತು. "ರಾತ್ರಿ ೧ ಗಂಟೆಯಾಗಿದೆ. ಇದೇ ಸಮಯದಲ್ಲಿ ಹುಲಿ ಹೊರಗಡೆ ತಿರುಗಾಡುತ್ತಿರುತ್ತದೆ. ಈಗ ಒಂದು ಬೀಟ್( ಸುತ್ತು ) ಹೊಡೆಯಲು ಹೋದರೆ, ಅದು ಕಣ್ಣಿಗೆ ಬೀಳಬಹುದು" ಅಂತ ಯಾರೊ ಹೇಳಿದರು. ಇನ್ನೊಬ್ಬ, "ನಮ್ಮ ಹತ್ರ ಕೂಡ ಬ್ಯಾಟ್, ವಿಕೇಟ್, ಕಬ್ಬಿಣದ ಸರಳು( ಯಾವುದೊ ಮುರಿದ ಕಿಟಕಿಯದದು ), ಕಬ್ಬಿಣದ ಚೈನು ( ಊರಿಗೆ ಹೋಗುವಾಗ ಲಗೇಜ್ ಕಟ್ಟೋಕೆ ಬಳಸೋದು ) ಎಲ್ಲಾ ಇವೆ. ತಗೊಂಡು ಹೋಗೋಣ. ಹಾಗೇನಾದರು ಹುಲಿ ಸಿಕ್ಕ್ರೇ ಜಜ್ಜಿ ಹಾಕಿ ಬಿಡೋಣ. ಇಷ್ಟೊಂದು ಜನ ಬೇರೆ ಇದ್ದೀವಿ" ಅಂದ. ಹೌದು, ಅವನಂದದ್ದು ಸರಿಯಾಗಿತ್ತು. ನಾವು ಇದ್ದದ್ದು ಸುಮಾರು ೨೫-೩೦ ಮಂದಿ. ಸಿಗರೇಟ್ ಹಚ್ಚಿಕೊಂಡು, ತಲೆಗೇ ಕ್ಯಾಪ್, ಕೆಲವರು ಶೂಸ್, ಟಾರ್ಚ್ ತಗೊಂಡು ಮೇಲೆ ಹೇಳಿದ ಅಸ್ತ್ರಗಳನೆಲ್ಲ ಕೈಗೊಂದರಂತೆ ಹಿಡಿದುಕೊಂಡು ಸೈನ್ಯೆ ರೆಡಿಯಾಗಿಯೇ ಬಿಟ್ಟಿತು. ೧೦-೧೫ ನಿಮಿಷದ ಹಿಂದೆ, ಬೀಡಿ-ಸಿಗರೇಟ್ ಎಳೆಯುತ್ತಾ ಕುಳಿತಿದ್ದ ಹುಡುಗರು ಒಮ್ಮೆಲೇ ಈ ರೀತಿ ಶಸ್ತ್ರ-ವಸ್ತ್ರಗಳಿಂದ ಸಿದ್ದವಾದಾಗ ನನಗೆ ಮೊದಲ ಸಲ ಅರಿವಾಗಿದ್ದು - "ಬಿಸಿರಕ್ತ" ಅಂದರೇನು? "ಬಿಸಿರಕ್ತದ ಯುವಕರು" ಅಂತ ಯಾಕೆ ಹೇಳ್ತಾರೆ? ಅಂತ.
ಎಲ್ಲರೂ ಗುಂಪಿನಲ್ಲೆ ಇರಬೇಕು. ಹುಲಿಯ ಇರುವಿಕೆ, ಬರುವಿಕೆ ಗೊತ್ತಾದೊಡನೆಯೇ ಗುಂಪಾಗಿ ಅದರ ಮೇಲೆ ಬೀಳೋಣ, ಘರ್ಷಿಸೋಣ...ಹೀಗೆ ಕೆಲವು ನಿಯಮಗಳನ್ನು, ಯೋಜನೆಗಳನ್ನು ಹಾಕಿಕೊಂಡು ಹೊರಟಿತು ಪಡೆ, ಹುಲಿಯ ಕಡೆ, ಅದನು ಹಿಡಿಯಲು-ಬಡಿಯಲು-ಕಡಿಯಲು.
ನಮ್ಮ ಹಾಸ್ಟೆಲ್ ಇರುವುದು ಕ್ಯಾಂಪಸ್‍ನ ಒಂದು ಕಡೆಗೆ. ಆ ಪಂಜರವಿಟ್ಟಿರುವುದು ಕ್ಯಾಂಪಸ್‍ನ ಇನ್ನೊಂದು ಕಡೆಗೆ. ಅಲ್ಲಿಗೆ ಹೋಗಲು ನೇರವಾದ ರಸ್ತೆ. ನಾವೆಲ್ಲಾ ಅದೇ ರಸ್ತೆಯಲ್ಲಿ ದಾಪುಗಾಲುಗಳನಿಡುತ್ತಾ ಹೊರಟೆವು. ಹಾಸ್ಟೆಲ್‍ನಲ್ಲಿ ಅರ್ಧಕ್ಕೆ ನಿಂತಿದ್ದ ಚರ್ಚೆಗಳು ಮುಂದುವರೆದವು. ಆ ರಸ್ತೆಯ ಮುಕ್ಕಾಲು ಭಾಗದ ಎಡಗಡೆಗೆ ಕಾಲೇಜಿನ ಕ್ಲಾಸ್ ರೂಮ್‍ಗಳು, ಬಲಗಡೆಗೆ ಬಯಲು, ಬಯಲಿನ ಆ ಕಡೆಗೆ ಬೇರೆ ಕ್ಲಾಸ್ ರೂಮ್‍ಗಳು. ಕ್ಲಾಸ್ ರೂಮ್‍ಗಳ ಹೊರಗಡೆಯ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಸಾಕಷ್ಟು ಬೆಳಕು ಬೀಳುತ್ತಿದ್ದುದ್ದರಿಂದ ಭಯ ಪಡಬೇಕಾಗುವ ಅವಶ್ಯಕತೆ ಬರಲಿಲ್ಲ.ಇಬ್ಬರೂ ಹುಡುಗರು ಹಾಗೆಯೇ ಮುಂದು ನಡೆದರು ಸಹ. ಸ್ವಲ್ಪ ಹೊತ್ತಿನಲ್ಲೆ ಆ ರಸ್ತೆಯ ಕೊನೆ ಬಂದಿತು. ಎರಡು ಬದಿಗೆ ಮೊಣಕಾಲುದ್ದದ ಒಣ ಹುಲ್ಲು. ಅಲ್ಲಿಂದ ಎಡಗಡೆಗೆ ತಿರುಗಿದರೇ ಮತ್ತೇ ನೇರವಾದ ರಸ್ತೆ. ಅಲ್ಲಿಂದಲೇ ಕತ್ತಲು ಶುರುವಾಗುವುದು ಕೂಡ.
ನಾವೆಲ್ಲ ಎಡಗಡೆಗೆ ತಿರುಗುತ್ತಿದ್ದಂತೆ, ಆ ಒಣಗಿದ ಹುಲ್ಲುಗಳ ಒಂದು ಮೂಲೆಯಿಂದ ಹುಲ್ಲಿನ ಪೊದೆ ಜೋರಾಗಿ ಅಲ್ಲಾಡ ತೊಡಗಿತು. ಒಂದು ಕ್ಷಣ ಎಲ್ಲರ ಮಾತು ನಿಂತು ಬಿಟ್ಟವು. ಎಲ್ಲರದೂ ಆ ಹುಲ್ಲಿನ ಪೊದೆಗಳೆಡೇ ದೃಷ್ಠಿ. ಹುಲಿ ಸಿಕ್ಕಿತು. ನಮಗೆ ಏನೂ ಮಾಡಬೇಕೊ ತೋಚುತ್ತಲೇ ಇಲ್ಲ. ಕೈಯಲ್ಲಿ ಬ್ಯಾಟು, ವಿಕೇಟು, ಬೆಲ್ಟು, ಚೈನು ಆದರೆ ಕಾಲುಗಳು ಮೆಲ್ಲನೆ ಹಿಂಜರಿಯುತ್ತಿದ್ದವು. ಇಡೀ ಗುಂಪಿಗೆ ಗುಂಪೇ ಕಾಲು ಹಿಂದೆ ಹಾಕಹತ್ತಿತು. ಆ ಹುಲ್ಲಿನ ಪೊದೇ ಅಲ್ಲಾಡುತ್ತಾ ನಮ್ಮೆಡೆಗೇ ಬರ ತೊಡಗಿತು. "ಓಡ್ರಲೊ..." ಅಂತ ಯಾವನೋ ಕೂಗಿಬಿಟ್ಟ. ಆರ್ಡರ್‍ಗೆ ಕಾಯುತ್ತಿದ್ದರೊ ಏನೊ? ತಕ್ಷಣ - ಹುಡುಗರೆಲ್ಲಾ ಹಿಂದೆ ತಿರುಗಿದ್ದೆ ತಡ ಓಟ ಶುರು. ಅದೇ ಕ್ಷಣದಲ್ಲಿ, ಆ ಹುಲ್ಲಿನ ಪೊದೆಯಿಂದ ನಮ್ಮ ಗುಂಪಲ್ಲಿ ಮುಂದೆ ಹೋಗಿದ್ದ ಇಬ್ಬರು ಹುಡುಗರು ಎದ್ದು ನಿಂತು - ಹ್ಹ...ಹ್ಹ...ಹ್ಹ...ಅಂತ ಗಹಗಹಿಸಿ ನಕ್ಕು ಬಿಟ್ಟರು. ಓಡಲು ಕಿತ್ತಿದ್ದ ಕಾಲುಗಳು ಹಾಗೇ ನಿಂತು ಬಿಟ್ಟವು.
ಹುಲಿ ಸಿಕ್ಕ ರೋಮಾಂಚನ - ಏನೂ ಮಾಡಬೇಕೆಂದು ಗೊತ್ತಾಗದ ದಿಗ್ಭ್ರಮೆ - ಪ್ರಾಣ ಸಂಕಟದಲ್ಲಿದೆ ಎಂಬ ಅರಿವು - ಕೊನೆಗೇ ಛೇ! ಇವರಾ ಅನ್ನೋ ತಾತ್ಸರದಿಂದ ಕೂಡಿದ ಸಮಾಧಾನ...ಎಲ್ಲವೂ ಒಂದೆರಡೂ ಕ್ಷಣದಲ್ಲೇ ಬಂದು ಹೋಗಿಬಿಟ್ಟವು.
ಹಿಂದಿಟ್ಟ ಹೆಜ್ಜೆ ಮತ್ತೆ ತಿರುಗಿಸಿ ಮುಂದಿಟ್ಟೆವು. ಆ ಎಡ ತಿರುವಿನ ರಸ್ತೆಯಲ್ಲಿ ಕೊನೆತನಕ ಹೋದಾಗ ಕಾಲೇಜು ಸಿಕ್ಕಿತು. ಅಲ್ಲಿ ಪೇದೆ ಕುಳಿತಿದ್ದ. ಅವನು ಅಲ್ಲಿ ವನ್ಯಮೃಗ ರಕ್ಷಕ ತಂಡದವರು ಹಾಕಿಟ್ಟ ಪಂಜರವನ್ನು ತೋರಿಸಿ, ೨-೩ ದಿವಸಗಳ ಹಿಂದೆ ಏನಾಗಿತ್ತು ಅಂತೆಲ್ಲಾ ವರ್ಣಿಸಿದ. ವರ್ಣವೇ ಇಳಿದು ಹೋಗಿದ್ದ ನಾವು ಅದೆಲ್ಲ ಕೇಳಿಸಿಕೊಂಡು ಸುಮಾರು ೩ ಗಂಟೆಗೇ ಹಾಸ್ಟೆಲ್‍ಗೇ ಹಿಂದಿರುಗಿ, ನಮ್ಮ ಶಸ್ತ್ರಾಸ್ತ್ರಗಳನ್ನು ಅವುಗಳ ಸ್ಥಾನದಲ್ಲಿಟ್ಟು ಮಲಗಿದೇವು.

Friday, June 19, 2009
ಕಥೆ ಹೇಳಲು ಹೋಗಿ ಕತ್ತೆಯಾದ ನಾನು
ಧನ್ಯಾ ನನ್ನ ನಾದಿನಿಯ ಮಗಳು. ೩ ರಿಂದ ೪ಕ್ಕೆ ಹೋಗುತ್ತಿರುವ, ಸಿಕ್ಕಾಪಟ್ಟೆ ಕುತೂಹಲದ ಹುಡುಗಿ. ಬೀರೂರಲ್ಲಿ ಅಜ್ಜಿ-ಅಜ್ಜರ ಜೊತೆಗಿದ್ದಾಳೆ. ಅಜ್ಜನ ಮನೆ ಪಕ್ಕದಲ್ಲಿಯೇ, ಮುತ್ತಜ್ಜನ ಮನೆ. ಸಾಕಲ್ಲವೇ, ಬಾಲ್ಯದ ಜೀವನಕ್ಕೆ ಸ್ವರ್ಗವೇ ಇದ್ದ ಹಾಗೇ. ಬೀರೂರು ಸಣ್ಣ ಊರು. ಅಜ್ಜಿ ಮನೆಯಲ್ಲಿ ಬೊರ್ ಇಲ್ಲ. ಗಚ್ಚು ತುಂಬಿಸೊದು ರೂಢಿ.
ನಮ್ಮ ಅತ್ತೆ-ಮಾವನವರು( ಅಂದರೆ ಧನ್ಯಾಳ ಅಜ್ಜ-ಅಜ್ಜಿ) ಬೆಂಗಳೂರಿಗೆ ಸಂಬಂಧಿಕರ ಮದುವೆಗೆ ಬಂದಿದ್ದರು.ಅಜ್ಜ-ಅಜ್ಜಿ ಜೊತೆಗೇ ಧನ್ಯ ಕೂಡ ಬಂದಿದ್ದಳು. ಅವಳು ಬಂದಿದ್ದು ನಮಗೆ ಖುಶಿಯೊ ಖುಶಿ. ಅವಳಿಗೂ ಅಷ್ಟೆ ಸಂಭ್ರಮ. ನಮಗೆ ಯುಗಾದಿ-ಅವಳಿಗೆ ದೀಪಾವಳಿ. ಅವಳು ತಿಂಗಳುಗಳಿದ್ದಾಗಿನಿಂದಲೂ ನಾನು ಅವಳೊಂದಿಗೆ ತುಂಬಾ ಒಡನಾಡಿದ್ದೇನೆ. ಅದಕ್ಕೆ, ಮನೆಗೆ ಬಂದೊಡನೆ - ದೊಡ್ಡಪ್ಪ ಎಲ್ಲಿದಿ? ಏನು ಮಾಡ್ತಿದಿ? ಅದು ಏನು-ಇದು ಏನು? ಹೀಗೆ ಪ್ರಶ್ನೆಗಳ ಸುರಿಮಳೆ. ನಂತರ, ಬಾ ಅಡುಗೆ ಆಟ ಆಡೋಣ, ಸ್ನಾನ ಮಾಡಿಸೋ ಆಟ ಆಡೋಣ; ಆಮೇಲೆ, ಈ ಕಥೆ ಹೇಳು-ಆ ಕಥೆ ಹೇಳು ಅಂತ. ಹೇಳಿದ ಕಥೆಯನ್ನೇ ಹೇಳಿ-ಹೇಳಿ ನನಗೆ ಬೇಸರ; ಅದೇ ಕಥೆ-ಅದೇ ಕ್ಲೈಮಾಕ್ಸ್ ಕೇಳಲು ಅವಳಿಗೆ ಸಡಗರ.
ಹೀಗೆಯೇ, ಅವಳಿಗೇ ಕಥೆಗಳನ್ನು ಹೇಳುವಾಗ ಘಟನೆಗಳಿವು: ನಾನು ಅವಳಿಗೆ ಮೊದಲ ಸಲ ಕಥೆ ಹೇಳುತ್ತಿದ್ದದ್ದು. ಇದು ಆ ಕಾಗೆ-ಹೂಜಿ ಕಥೆ. ನಿಮಗೆಲ್ಲಾ ಗೊತ್ತಿರಲೇಬಹುದು - ಕಾಗೆಗೇ ಬಾಯಾರಿಕೆಯಾಗಿ ನೀರನ್ನು ಅರಸಿ ಹೊಗುತ್ತದೆ. ಕೊನೆಗೊಂದು ಮನೆಯ ಮೇಲಿನ ಹೂಜಿವೊಂದರಲ್ಲಿ ನೀರನ್ನು ಕಾಣುತ್ತದೆ. ಆ ನೀರು ಕೆಳಮಟ್ಟದಲ್ಲಿರುತ್ತದೆ...ಹೀಗೆ ಆ ಕಥೆ ಮುಂದುವರಿಯುತ್ತದೆ. ಕಥೆ ಶುರು ಮಾಡುವ ಮೊದಲು ನನಗೊಂದು ಯೊಚನೆ ಬಂತು. ಸುಮ್ಮನೆ - "ಒಂದು ಊರಿನಲ್ಲಿ" ಅಂತಾ ಹೇಳುವ ಬದಲು "ಬೀರೂರು" ಅಂತಾ ಹೇಳಿದರೇ, ಇವಳು ಇದು ತನ್ನೂರಿನ ಕಥೆಯೆಂದು ಇನ್ನೂ ಕುತೂಹಲದಿಂದ ಕೇಳುತ್ತಾಳೆ ಎಂದಂದುಕೊಂಡೆ. ನನಗೆ ಹಿಗ್ಗೊ-ಹಿಗ್ಗು. ಏನೊ ಹೊಸತು ಪ್ರಯೊಗ ಮಾಡುತ್ತಿರುವೆನೆಂಬ ಖುಶಿ. ಶುರು ಮಾಡಿದೆ - "ಬೀರೂರಲ್ಲಿ ಒಂದು ಕಾಗೆ ಇತ್ತು. ಅದೊಂದು ದಿನ ತುಂಬಾ ಬಿಸಿಲಿತ್ತಂತೆ.ಆ ಕಾಗೆಗೇ ತುಂಬಾ ನೀರಡಿಕೆಯಾಗಿತ್ತು.ಅದು ಅಲ್ಲಿ-ಇಲ್ಲಿ ಎಲ್ಲ ಕಡೆ ನೀರನ್ನು ಹುಡುಕುತ್ತ ಇತ್ತು. ಅದಕ್ಕೆ ನೀರೆ ಸಿಗಲಿಲ್ಲ". ಅಲ್ಲಿಗೆ, ಧನ್ಯ - "ಹಾಗಿದ್ದರೆ, ಆದು ಅಜ್ಜನ ಮನೆಗೆ ಹೊಗಬಹುದಿತ್ತಲ್ಲ ದೊಡ್ಡಪ್ಪ. ಅಲ್ಲಿ ನೀರು ಸಿಗುತ್ತಿತ್ತು" ಎಂದಳು. ನಾನು ಒಂದು ಕ್ಷಣ ಅವಕ್ಕಾದೆ. ಕಥೆಯನ್ನು ಹಾಗೇ ಹೇಳೋಣ-ಹೀಗೇ ಹೇಳೋಣ ಅಂತ ನಾನೇ ಕಥೆಯಲ್ಲಿ ಎಷ್ಟು ಮಗ್ನನಾಗಿದ್ದೇನೆಂದರೆ, ಮುಂದೆ ಏನು ಹೇಳಬೇಕೊ ಗೊತ್ತೆ ಆಗಲಿಲ್ಲ. ಅವಳ ದೊಡ್ಡಮ್ಮ, ಅಂದರೆ ನನ್ನಾಕೆ, ಅಲ್ಲೇ ಕುಳಿತ್ತಿದ್ದಳು. ತಕ್ಷಣ - "ಇಲ್ಲ ಧನ್ಯ, ಅವತ್ತು ನೀರು ಬಂದಿರಲಿಲ್ಲ. ಅದಕ್ಕೆ ಮನೆಯಲ್ಲಿ ನೀರೇ ಇರಲಿಲ್ಲ". ಅಂದಳು. ಧನ್ಯಳ ಪ್ರತ್ಯುತ್ತರ ರೆಡಿಯಾಗಿಯೇ ಇತ್ತು - "ಹಾಗಿದ್ದರೆ, ಪಕ್ಕದ ಅಜ್ಜನ ಮನೆಯಲ್ಲಿ ಕೇಳಬಹುದಿತ್ತಲ್ಲ" ಅಂದಳು. ಅಲ್ಲಿಗೆ, ನನ್ನ ಹೆಂಡತಿ ಬಾಯಿಗೂ ಬೀಗ ಬಿತ್ತು. ಹಾಗೆಯೇ, ಕಥೆ ಕೂಡ ಮುಗಿದಿತ್ತು. ಏಕೆಂದರೆ, ಮುಂದೆ ಹೇಳಲು ಅವಳು ನನಗೆ ಬಿಡಲೇ ಇಲ್ಲ.ಅವಳಿಗೆ, ಆ ಕಥೆಯ ಕ್ಲೈಮ್ಯಾಕ್ಸಗಿಂತ ಸದ್ಯಕ್ಕೆ ಆ ಕಾಗೆ ಅಜ್ಜನ ಮನೆಗೇ ಯಾಕೆ ಹೋಗಲಿಲ್ಲ? ಅನ್ನೋದೆ ತಲೆಯಲ್ಲಿ ತುಂಬಿ ಹೋಯಿತು. ಕಾಗೆ, ಬೀರೂರು, ನನ್ನ ಹೊಸ ಪ್ರಯೊಗ ಎಲ್ಲ ಎಕ್ಕುಟ್ಟುಕೊಂಡು ಹೋಯಿತು!
ಇನ್ನೂ ಎರಡನೇ ಘಟನೆ, ಕೆಲದಿನಗಳ ನಂತರ.ನಾನು ನಾಲಿಗೆ ಸುಟ್ಟುಕೊಂಡ ಬೆಕ್ಕಿನಂತೆ ಆಗಿದ್ದೆ. ಮತ್ತೊಮ್ಮೆ ಕಥೆ ಹೇಳುವ ಪ್ರಸಂಗ ಒದಗಿ ಬಂತು. ಈ ಸಲ ನನಗೆ ಗೊತ್ತಿತ್ತು - ಇವಳಿಗೆ ಕಥೆ ಹೇಳಿದರೆ ಅವಕ್ಕಾಗುವ ಸ್ಥಿತಿ ಬರೋದು ಗ್ಯಾರಂಟಿ ಅಂತ. ಅದಕ್ಕಾಗಿ ಯಾವುದೇ ಪ್ರಯೋಗಕ್ಕೆ ಕೈ ಹಾಕಲಿಲ್ಲ. ಈ ಸಲದ ಕತೆ ಒಗ್ಗಟ್ಟಿನದು. ನಾವು ಸಣ್ಣವರಿದ್ದಾಗ ಡಿಡಿ-೧ ರಲ್ಲಿ ಬರುತ್ತಿತ್ತು. ಬೇಡ-ಗುಬ್ಬಿಗಳ ಕಥೆ - "ಆ ಗುಬ್ಬಿಗಳ್ಳೆಲ್ಲ ಒಮ್ಮೆ ಮರದ ಕೆಳಗೆ ಬಿದ್ದ ಅಕ್ಕಿ ಕಾಳುಗಳನ್ನು ಹೆಕ್ಕುತಿರುತ್ತವೆ. ಅವಕ್ಕೆ ಬೇಡ ಬಲೆ ಬೀಸುತ್ತಾನೆ. ಅವೆಲ್ಲವೂ ಸೇರಿ ಆ ಬಲೆಯನ್ನು ಎತ್ತಿಕೊಂಡು ಬೇರೆ ಊರಿಗೆ ಹಾರಿ ಹೋಗುತ್ತವೆ. ಅಲ್ಲಿ ಇಲಿಗಳೊಂದಿಗೆ ಸ್ನೇಹ ಮಾಡಿ..." ಹೀಗೆ ಕಥೆ ಮುಂದುವರಿಯುತ್ತದೆ. ನಾನು ಶುರು ಹಚ್ಚಿಕೊಂಡೆ - "ಒಂದೂರಿನಲ್ಲಿ ಬಹಳಷ್ಟು ಗುಬ್ಬಿಗಳದ್ದವಂತೆ. ಅವಕ್ಕೆಲ್ಲಾ ಹೊಟ್ಟೆ ಹಸಿದಿತ್ತು. ಅಲ್ಲಿ ಒಂದು ಮರದ ಕೆಳಗೆ ಅಕ್ಕಿ ಕಾಳುಗಳು ಬಿದ್ದಿದ್ದವಂತೆ. ಅವೆಲ್ಲವು ನೆಲದ ಮೇಲಿದ್ದ ಅಕ್ಕಿಯ ಕಾಳುಗಳನ್ನು ತಿನ್ನಲು ಶುರುಮಾಡಿದವಂತೆ...". ಅಷ್ಟೇ!, ಅಲ್ಲಿಗೆ ಅವಳದೊಂದು ಬ್ರೇಕ್ ಬಿತ್ತು - "ದೊಡ್ಡಪ್ಪ, ಆ ಗುಬ್ಬಿಗಳು ನೆಲದ ಮೇಲೆ ಬಿದ್ದದ್ದನ್ನು ಯಾಕೆ ತಿನ್ನುತ್ತಿದ್ದವು? ಅದು ಹೊಲಸಾಗಿರುತ್ತಲ್ಲಾ. ತಟ್ಟೆಯಲ್ಲಿರೊದನ್ನ ತಿನ್ನಬೇಕು" ಅಂದಳು. ಈ ಸಲವೂ ನಾನು ಒಂದು ಕ್ಷಣ ಅವಕ್ಕಾದೆನಾದರು, ಪ್ರಿಪೇರ್ ಆಗಿದ್ದನಲ್ಲಾ ಅದಕ್ಕೆ " ಜೋರ್ ಕಾ ಜಟಕಾ ಧೀರೆ ಸೇ ಲಗಾ". ಇಲ್ಲಮ್ಮಾ ಅವಕ್ಕೆ ಗೊತ್ತಗೊಲ್ಲ. ಅವು ಹಾಗೇಯೆ ತಿನ್ನೊದು ಅಂತಾ ಹೇಳಿ ಕಥೆ ಮುಂದುವರಿಸಿಬಿಟ್ಟೆ. ಅಷ್ಟೆ ಅಲ್ಲಾ ಈ ಸಲ ಕಥೆ ಮುಗಿಸಿದೆ ಕೂಡ!
ಹೀಗೆ - ನನ್ನ ಮಗಳಿಗೆ ಕಥೆ ಹೇಳಲು ಹೋಗಿ ನನ್ನದೇ ಒಂದು ಕಥೆ ಆಗೋಯ್ತು.

Monday, June 15, 2009
ಗುಳಿಗೆಯ ಗಳಿಗೆ
ನನ್ನಾಕೆಗೇ ಗುಳಿಗೆ ನುಂಗುವುದೆಂದರೇ ಪ್ರಾಣ ಸಂಕಟ, ಧರ್ಮ ಸಂಕಟ. ಪ್ರಾಣ ಸಂಕಟ ಯಾಕೇಂದರೇ, ಆ ಗುಳಿಗೆಗೇ ಅವಳ ಗಂಟಲಿನ ನಾಳ ಸಣ್ಣದು ಎಂಬುದು ಅವಳ ಅಭಿಪ್ರಾಯ. ಜೊತೆಗೇ, ಆ ಗುಳಿಗೆಯ ವಾಸನೇ ಅವಳಿಗೆ ದೂರದಿಂದಲೇ ಆಗದು. ಅದು ಅವಳಿಗೇ ದೂರ್-ವಾಸನೇ. ಇನ್ನೂ ಧರ್ಮ ಸಂಕಟ ಯಾಕೇಂದರೇ, ಅದನ್ನು ನುಂಗದಿದ್ದರೇ ಆರೋಗ್ಯ ಭಾಗ್ಯ ಇಲ್ಲ!!
ನನ್ನದೊ ಅಥವಾ ನಮ್ಮ ಮಾವನವರ ಒತ್ತಾಯಕ್ಕೆ ಮಣಿದು ಏಕಾದಶಿಗೊ, ಸಂಕಷ್ಟಿಗೊ ಗುಳಿಗೆಯನ್ನು ಗುಳುಂ ಮಾಡುತ್ತಾಳೆ. ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಅಸ್ಪಶ್ಯತೆ ರಾ...ರಾ...ಅಂತಾ ರಾರಾಜಿಸುತ್ತಿತ್ತಂತೆ. ಈ ಅಸ್ಪಶ್ಯತೆ ಅಂದರೇನು? ಆ ರೀತಿಯಾಗಿ ಜನ ಹೇಗೆ ವರ್ತಿಸಲೂ ಸಾಧ್ಯ? ಎಂಬ ಹಲವಾರು ಪ್ರಶ್ನೆಗಳು ನನ್ನ ತಲೆಯಲ್ಲಿ ದಶಮಾನಗಳಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದವು. ಅವುಗಳಿಗೆಲ್ಲಾ ನನ್ನ ಹೆಂಡತಿ ಉತ್ತರಿಸಿದಳು. ಎಲ್ಲರೂ ಗುಳಿಗೆಯನ್ನು ವಿಘ್ನ ಪರಿಹಾರಕನ ರೀತಿಯಲ್ಲಿ ನೋಡಿದರೇ, ನನ್ನ ಹೆಂಡತಿ ಅದನ್ನು ನೀಚಕುಲದವನಂತೇ ನೋಡುತ್ತಾಳೆ. ನೊಡುವದಷ್ಟೇ ಅಲ್ಲಾ, ಅದನ್ನು ಹಿಡಿಯುವುದು ಹಾಗೇನೇ - ಎಲ್ಲಿ ತನ್ನ ಮಡಿ ಮುರಿದು ಹೋಗುವುದೊ ಎನ್ನುವಂತೆ. ಜಿರಲೇಯನ್ನು ಹೇಗೆ ಅದರ ಕಾಲ ತುದಿಯನ್ನೊ ಅಥವಾ ಮೀಸೆ ತುದಿಯನ್ನೊ ಹಿಡಿದು ಹೊರದೂಡುತ್ತೆವೊ ಹಾಗೇ ಇವಳು ಗುಳಿಗೆಯನ್ನು ತುದಿಯಲ್ಲಿ ಹಿಡಿದು ತನ್ನ ಮುಂದಿನ ಕಾರ್ಯವನ್ನು ಮುಂದುವರಿಸುತ್ತಾಳೆ.
ನನ್ನ ಪಿ.ಯು.ಸಿ ಆದ ಮೇಲೆ ಎರಡನೇ ಯೋಚನೇ ಮಾಡದೇ ಇಂಜಿನಯರಿಂಗ್ ಸೇರಿದೆ. ನಾನು ಡಾಕ್ಟರ್‍ಗಿರಿಗೇ ಹೋಗಬೇಕಂತಾ ನನ್ನಗೆಂದೂ ಅನಿಸಲಿಲ್ಲ. ಬಹುಶಃ ಆ ದೇವರು ಮುಂಬರುವ ನನ್ನ ಬಾಳಸಂಗಾತಿಯನ್ನು ಫಿಕ್ಸ್ ಮಾಡಿ ಇಟ್ಟಿದ್ದಾ ಅನಿಸುತ್ತೆ. ಅದಕ್ಕೇ ಆ ಯೋಚನೆಯನ್ನಾ ನನ್ನ ತಲೆಯಲ್ಲಿ ತರಲೆಯಿಲ್ಲಾ.

Friday, May 29, 2009
ಈ ದೋಸೆ...ಆ ಹುಡುಗಿ
ಪಿ.ಯು.ಸಿ ೨ನೇ ವರ್ಷ. ನಾನು, ವಿಜಯ್ ಮಸಾಲೇ ದೋಸೆ ತಿನ್ನಲು ಹೊಟೆಲ್‌ಗೆ ಹೋಗಿದ್ದೆವು. ಅದು-ಇದು ಅಂತ ಮಾತಾಡುತ್ತಿದಂತೆ ಟೇಬಲ್‍ಗೆ ಎರಡು ಮಸಾಲೆ ದೋಸೆ ಬಂದೆ ಬಿಟ್ಟಿತು. ಮಸಾಲೆ ದೋಸೆಯನ್ನು ತಿನ್ನುವ ವಿಶೇಷ ಹಾಗು ಸರಿಯಾದ ಪದ್ಧತಿಯನ್ನು ವಿಜಯ್ ಅಂದು ನನಗೆ ತೋರಿಸಿದ - ದೋಸೆಗೆ ಮಸಾಲೆ( ಆಲುಗಡ್ಡೆ ಪಲ್ಲೆ, ಶೇಂಗಾ ಚಟ್ನಿ) ಹಾಕಿ ಸುತ್ತಿ ಕೊಟ್ಟಿರುತ್ತಾರೆ. ಅದನ್ನು ಉದ್ದವಾಗಿ ಎದ್ದು ನಿಲ್ಲಿಸಿದಾಗ ಮಸಾಲೆ ತಟ್ಟೆಗೆ ಬೀಳುತ್ತದೆ. ಎದ್ದು ನಿಲ್ಲಿಸಿದ, ಆದರೆ ಇನ್ನು ಸುತ್ತಿರುವ, ಮಸಾಲೆ ದೋಸೆಯನ್ನು ಮತ್ತೆ ತಟ್ಟೆಗೆ ಅಡ್ಡವಾಗಿ ಮೊದಲಿನ ಹಾಗೇ ಇಟ್ಟು, ಮೇಲಿನಿಂದ ಒತ್ತಬೇಕು. ಆಗ ಅದು ಪದರು-ಪದರುಗಳಾಗಿ ಮುರಿಯುತ್ತದೆ. ಆ ಪದರುಗಳಲ್ಲಿ, ಮೇಲ್ಪದರಿನಿಂದ ತುಂಡು-ತುಂಡಾಗಿ ಮಾಡುತ್ತಾ, ಮಸಾಲೆಯನ್ನು ಹಚ್ಚಿ ತಿನ್ನಬೇಕು. ಇದನ್ನು ಕೇಳಿ ನಾನು ತುಂಬಾ ಹೊಗಳಿದ್ದೇ.
ವರ್ಷಗಳು ಉರುಳಿದವು. ನಾನು ಇಂಜಿನಯರಿಂಗೆ ಮೈಸೂರ್ ಸೇರಿದೆ. ಇಂಜಿನಯರಿಂಗ್‌ನ ಕೊನೆಯ ವರ್ಷವದು. ಸುಮಾರು ೨೦-೨೧ರ ಹರೆಯ. ಹುಡುಗಿ ಒಮ್ಮೆ ಕಣ್ಣು ಇತ್ತ ತಿರುಗಿಸಿ, ತುಟಿಯಲ್ಲಿ ಸಣ್ಣ, ತುಂಟ ನಗೆ ಕೊಟ್ಟರೆ, ಜಗತ್ತೇ ಮರೆತು ಹೋಗುವ ಹುಚ್ಚು ವಯಸ್ಸು.
ನಾನು ಹಾಗು ಇನ್ನು ಮೂರು ಗೆಳೆಯರು ಸೇರಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೊನೆಯ ವರ್ಷದ ಪ್ರಾಜೆಕ್ಟ್ ಕೆಲಸವನ್ನು ಕೈಗೆತ್ತಿಕೊಂಡಿದ್ದೆವು. ವಾರಾಂತ್ಯಕ್ಕೆ ಮೈಸೂರಿನಿಂದ-ಬೆಂಗಳೂರಿಗೆ ಪ್ರಯಾಣ. ಮುಂಜಾನೆ ೬ ಗಂಟೆಗೆ ಹೊರಟು ಬೆಂಗಳೂರಿಗೆ ಸುಮಾರು ೯ ಗಂಟೆಗೆ ಬಂದು ತಲುಪುತ್ತಿದ್ದೆವು. ಇಳಿದ ಕೂಡಲೇ ಹತ್ತಿರದ ಹೋಟೆಲ್‌ನಲ್ಲಿ ತಿಂಡಿ.
ಹೀಗೆಯೇ ಒಂದು ದಿನ. ಹೋಟೆಲ್‌ಗೆ ಹೋದಾಗ ಒಂದು ಟೇಬಲ್‍ನಲ್ಲಿ ನಾವು ನಾಲ್ವರು ಕುಳಿತೆವು. ನಾನು ಯಥಾಪ್ರಕಾರ ಮಸಾಲೆ ದೋಸೆಯನ್ನೇ ಆರ್ಡ್‌ರ್ ಮಾಡಿದೆ. ನನ್ನ ಪಕ್ಕದ ಟೇಬಲ್‍ನ ಮುಂದಿನ ಟೇಬಲ್ ಖಾಲಿಯಿತ್ತು. ನೋಡುತ್ತಿದ್ದಂತೆಯೇ, ಅಲ್ಲಿಗೆ ಯುವಕ-ಯುವತಿಯರಿಬ್ಬರು ಬಂದು ಕುಳಿತರು. ಅವರು, ಕುಳಿತಿದ್ದದ್ದು ಹೇಗಿತೆಂದರೇ, ಆ ಯುವತಿ-ನಾನು ಮುಖಾ-ಮುಖಿಯಾಗಿದ್ದೆವು. ಆಗಲೇ, ಸ್ವಲ್ಪ ನಿದ್ದೆ ಕಣ್ಣಿನಿಂದ ಎಚ್ಚೆತ್ತಿದ್ದು.
ಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ, ಪಿ.ಯು.ಸಿ.ಯಲ್ಲಿ ಮಸಾಲೆ ದೋಸೆ ತಿಂದದ್ದು ತಲೆಯಲ್ಲಿ ಓಡ್ತಾ ಇತ್ತು. ಅದೇ ರೀತಿಯಲ್ಲಿ ನಾನು ಈಗ ಇವಳೆದುರು ದೋಸೆ ತಿಂದರೆ, ಫುಲ್ ಇಂಪ್ರೆಸ್ ಜಮಾಯಿಸಬಹುದು ಅನ್ನೊ ಖಾತರಿ ಬರ್ತಾಇತ್ತು.
ಅಷ್ಟರಲ್ಲಿ ನನ್ನ ದೋಸೆ ಟೇಬಲ್‍ಗೆ ಬಂತು. ಅದನ್ನು ನೋಡುತ್ತಿದ್ದಂತೆ, ನನ್ನ ಕತೆಯಲ್ಲಿ ಟ್ವಿಸ್ಟ್ ಕೂಡಾ ಬಂತು! ದುರಾದೃಷವಶಾತ್, ಆ ನನ್ನ ದೋಸೆ ಚಪಟ್ಟೆಯಾಗಿ-ತ್ರಿಕೋಣಾಕೃತಿಯಲ್ಲಿತ್ತು!! ಒಂದು ಕ್ಷಣ ನಿರಾಸೆಯಾದರೂ, ಹುಡುಗಿ ಇಂಪ್ರೆಸ್ ಮಾಡೋ ಆಸೆ ಮಾತ್ರ ಹೋಗಲಿಲ್ಲಾ. ಇವೆಲ್ಲದರ ಮಧ್ಯೆ ನನ್ನ-ಅವಳ ಕಣ್ಣುಗಳು ಒಬ್ಬರನ್ನೊಬ್ಬರು ಕುಶಲ-ಕ್ಷೇಮ ವಿಚಾರಿಸುತ್ತಲೇ ಇದ್ದವು. ಆ ದೋಸೆಯ ಮೇಲ್ಬಾಗದಲ್ಲಿ ಹಾಗೆಯೇ ದುಂಡಾಗಿ ಹರಿದೆ. ಅವಳ ಕಣ್ಣುಗಳಲ್ಲಿ ಕುತೂಹಲ ಮೂಡ ತೊಡಗಿತು. ಆ ದೋಸೆಯ ಮೂರೂ ಕೊನೆಗಳಲ್ಲಿ ಎರಡು ಕೊನೆಗಳನ್ನು ಹಿಡಿದು, ಮೂರನೆಯ ಕೊನೆಯನ್ನು ಚೆಲ್ಲಿ ಹೋಗದಂತೆ ನಿಧಾನವಾಗಿ ಎತ್ತಿ, ದೋಸೆಯನ್ನು ತಿರುಗಿ ಹಾಕಿದರೆ ಮಸಾಲೆಯಲ್ಲಾ ತಟ್ಟೆಗೆ ಬರುತ್ತದೆ. ದೋಸೆಯನ್ನು ಮತ್ತೆ ಮೊದಲಿನ ಹಾಗೆಯೇ ಇಟ್ಟು, ಮೇಲಿನಿಂದ ಒತ್ತಿ, ಪದರುಗಳಾಗಿ ಮಾಡಿ, ಹರಿದು ತಿನೋಣಾ ಅಂದು ಕೊಂಡೆ. ಹಾಗೆಯೇ ಶುರು ಮಾಡಿದೆ. ಎರಡು ಕೊನೆಗಳನ್ನು ಹಿಡಿದು ಮೂರನೆಯ ಕೊನೆಯನ್ನು ಮೇಲೆ ಎತ್ತುತ್ತಿದ್ದೆ. ಅವಳ ಕಣ್ಣುಗಳು ಪಿಟುಕದೆ ನನ್ನ ತಟ್ಟೆಯಲ್ಲೇ ನೆಟ್ಟಿದ್ದವು. ಅದೃಷ್ತಾ ಇಲ್ಲಿಯೂ ಕೈ ಕೊಟ್ಟು! ಆ ಮೂರನೆ ಕೊನೆಯನ್ನು ತಿರುಗಿಸಿ ಹಾಕುವಲ್ಲಿ, ಆ ದೊಸೆಯಲ್ಲಾ ಚೆಲ್ಲಾ-ಪಿಲ್ಲಿಯಾಗಿ ತಟ್ಟೆಗೆ ಬಿತ್ತು! ಅಷ್ಟೆ ಸಾಕು...ನಾನು ಪಟಕ್ಕನೆ ಅವಳೆಡೇ ನೋಡಿದೆ, ಅವಳು ಕಿಸಕ್ಕ್‌ನೆ ನಕ್ಕು ತಲೆ ಬಗ್ಗಿಸಿ ಬಿಟ್ಟಳು. ನನ್ನ ಸ್ಥಿತಿ ಹೇಳು-ಹೆಸರಿಲ್ಲದಂತಾಯಿತು. ಸುಮ್ಮನೆ ತಲೆ ಬಗ್ಗಿಸಿ ದೋಸೆ ತಿಂದೆ. ಮುಗಿಸಿ ಕೈತೊಳೆಯಲೆಂದು ಎದ್ದಾಗಲೇ ನನ್ನ ತಲೆ ಕೂಡಾ ಎದಿತು. ಅವಳು ಅಲ್ಲಿ ಇರಲೇ ಇಲ್ಲಾ! ಟೇಬಲ್ ಮೇಲೆ ಬಿಲ್,ಹಣ ಅಷ್ಟೆ ಇತ್ತು.
ಆ ಆಸೆಯ ದೋಸೆ ನನ್ನ ಮೀಸೆ ಮಣ್ಣು ಮಾಡಿತ್ತು!!

Subscribe to:
Posts (Atom)