ಇನ್ನೂ ಕೆಲವೇ ದಿನಗಳಲ್ಲಿ
ನೀವಾಗುವಿರಿ ಅಪ್ಪಾಜೀ;
ಈ ದಿನಗಳಲ್ಲಿ,
ನಿಮ್ಮ ಸನಿಹ-ನನ್ನ ಬಯಕೆ
ನಿಮ್ಮ ಆದ್ಯತೆ-ನನ್ನ ಕಾಳಜೀ;
ಆದರೆ ನಿಮ್ಮದೋ,
ಸದಾ ಈ ಊರು-ಆ ಊರು
ಯಾವುದೋ
ದೂರದ ಊರ ಪಯಣ,
ಇಲ್ಲವೇ,
ಈ ಕಥೆ-ಆ ಕಾದಂಬರಿ
ಯಾವುದೋ
ಪುಸ್ತಕದ ಪಾರಾಯಣ
ನಾ ಕೊಟ್ಟಿರುವೆ
ನಿಮ್ಮ ಕಂದನಿಗೆ ದೂರು,
ತಿಳಿಸಿರುವೆ
ಅದಕ್ಕೆನನಗಾದ ಬೇಜಾರು,
ಅದು ಈಗ
ನಿಮ್ಮ ಮೇಲೆಯೇ ಮುನಿಸಿ,
ಪುಟ್ಟ ಪಾದದೀ
ನನ್ನೊಳಗೆ ತಾಗಿಸಿ,
ಹೇಳುತಿರುವುದು ನಿಮಗೆ -
"ನಾ ಬರುವವರೆಗೆ
ಜೊತೆ ನೀಡಿ ಅಮ್ಮಳಿಗೆ,
ಇಲ್ಲದಿದ್ದಲ್ಲಿ,
ನಾ ಬಂದ ನಂತರ
ನನ್ನ ಪುಟ್ಟ ಪಾದದೀ
ಸರಿ ಬೀಳುವವು ನಿಮಗೆ,
ಜೋಕೆ! ಜೋಕೆ! ಜೋಕೆ!"
4 comments:
Chennagide!!...nimma patniyavara manadalada matannu neevu tilidu..poem barediddakke...10/10
ಹೇ ಕಿರಣ,
ಸಕತ್ ಆಗಿದೆ.ನಿಮ್ಮ ಧರ್ಮ ಪತ್ನಿಯವರ ಭಾವನೆಗಳನ್ನ ತು೦ಬಾ ಚೆನ್ನಾಗಿ ಅರ್ಥ ಮಾಡಿಕೊ೦ಡಿದ್ದೀರ
very cute! :D
Copacitica? :)
Nice one!
Post a Comment