ನಾನು ಆಗ ೭ನೇ ತರಗತಿಯಲ್ಲಿ ಓದುತ್ತಿದ್ದೆ. ಪ್ರಥಮ, ದ್ವೀತಿಯ, ತೃತಿಯ ಅನ್ನುವ ಕೋರ್ಸ್ಗಳನ್ನು ಸರ್ಕಾರ ಹಿಂದಿ ಕಲಿಯಲು ಒದಗಿಸಿಕೊಟ್ಟಿತ್ತು. ನನ್ನ ದೊಡ್ಡಮ್ಮನ ಮಗಳು ಈ ಕೋರ್ಸ್ಗಳನ್ನು ಮಾಡಿದ್ದಳು. ಅದಕ್ಕಾಗಿ ನಾನು ಅವರ ಊರಿಗೆ ಹೋದಾಗಲೆಲ್ಲ ಅವರು ಈ ಕೋರ್ಸ್ಗಳ ಬಗ್ಗೆ ಹೇಳುವವರು. ಅವರ ಮಗಳು ಈ ಕೋರ್ಸ್ಗಳಲ್ಲಿ ಚೆನ್ನಾಗಿ ಅಂಕಗಳನ್ನು ಪಡೆದುದ್ದು ಬೇರೆ. ಐಐಎಮ್ನಲ್ಲೊ, ಐಐಟಿಯಲ್ಲೊ ಕೋರ್ಸ್ ಮಾಡಿದ ಹಾಗೇ ಮಾತಾಡುತ್ತಿದ್ದರು!
ಹೀಗೊಮ್ಮೆ ರಜೆಯಿಂದ ವಾಪಾಸ್ ಬಂದಾಗ ನಮ್ಮ ಶಾಲೆಯಲ್ಲೂ ಈ ಕೋರ್ಸ್ಗಳನ್ನು ಶುರುಮಾಡಿದ್ದಾರೆ ಅಂತಾ ಗೊತ್ತಾಯಿತು. ವಾರದ ೨ ದಿನ ಕ್ಲಾಸ್ಗಳು - ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಮಧ್ಯಾಹ್ನ. ಕ್ಲಾಸ್ಗಳು ನಡೆಯುವುದು ನಮ್ಮ ಶಾಲೆಯಲ್ಲಿಯೇ. "ಪ್ರಥಮ" ನೇ ಮೊದಲ ಕೋರ್ಸ್. ನನ್ನ ಜೊತೆಗೆ ನನ್ನ ಗೆಳೆಯ ನಾಗರಾಜ ಕೂಡ ಸೇರಿದ. ಕೋರ್ಸ್ ಸಲೀಸಾಗಿ ನಡೆಯಿತು - ಪರೀಕ್ಷೆಗಳು ಬಂದವು. ನಾನು "ಪ್ರಥಮ" ಮುಗಿಸಿ, "ದ್ವೀತಿಯ" ಕೋರ್ಸ್ಗೇ ಸೇರುವ ಯೋಚನೆಯನ್ನು ಮಾಡಿದ್ದೆ. ನಾನು ಯಾವುದರಲ್ಲಿ ಕಡಿಮೆಯಿಲ್ಲ ಅಂತಾ ಕೆಲವರಿಗೆ ತೋರಿಸಬೇಕಿತ್ತು ನನಗೆ. ನನ್ನ ದೊಡ್ಡಮ್ಮನ ಮಗಳು "ತೃತಿಯ" ತನಕ ಮಾಡಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡಿದ್ದಳು.
ಪರೀಕ್ಷೆಗಳು ಮುಗಿದವು. ಕೊನೆಗೊಂದು ದಿನ ಫಲಿತಾಂಶ ಕೂಡ ಪ್ರಕಟವಾಯಿತು. ಅಂದು ಶನಿವಾರ. ನಾನು, ನಾಗರಾಜ ಜೊತೆಗೂಡಿ ಶಾಲೆಗೆ ಹೋದೆವು. ಹೊಸ ಬ್ಯಾಚ್ ಶುರುವಾಗಿತ್ತು. ನಾವು ಹೊರಗಡೆ ನಿಂತದ್ದನ್ನು ನೋಡಿ ನಮ್ಮ ಹಿಂದಿ ಟೀಚರ್ ನಮ್ಮನ್ನು ಒಳಗೆ ಕರೆದು ನಮ್ಮ ಮಾರ್ಕ್ಸ್ ಕಾರ್ಡ್ನ್ನು ಕೈಗಿತ್ತರು. ನಾವಿಬ್ಬರು ಅದನ್ನೇ ನೋಡುತ್ತ ಹೊರಗೆ ನಡೆದೆವು. ಅದರಲ್ಲಿ ಮಾರ್ಕ್ಸ್ ಬರೆದಿರಲಿಲ್ಲ. ಆದರೆ, ನಾನು ಕ್ಲಾಸ್ಗೆ ಥರ್ಡ್ ಅಂತಾ ಬರೆದಿದ್ದರು. ನಾಗರಾಜ ಸೆಕೆಂಡ್ ಬಂದಿದ್ದ. ನನಗಂತೂ ಎಲ್ಲಿಲ್ಲದ ಖುಶಿ. ಅಂತೂ, ನಾನು ಕಡಿಮೆಯಿಲ್ಲ ಅನ್ನೊ ಸಾಧನೆಯ ಭಾವನೆ. ಅಲ್ಲಿಂದ ಕಿತ್ತ ಓಟ ಮನೆ ಬಂದಾಗಲೇ ನಿಂತಿದ್ದು. ಸಂಜೆ ೫ ಗಂಟೆಯಾಗುತ್ತಿತ್ತು. ನಮ್ಮ ತಂದೆಯವರು ಇನ್ನೂ ಮಲಗಿದ್ದರು, ನಮ್ಮ ತಾಯಿಯವರು ಟ್ಯೂಶನ್ ಹೇಳುತ್ತಿದ್ದರು. ಬಾಗಿಲಲ್ಲೇ ನಿಂತ ನಾನು ಕೂಗಿದೆ - "ಅಮ್ಮ, "ಪ್ರಥಮ" ಕೋರ್ಸ್ನ ಫಲಿತಾಂಶ ಪ್ರಕಟವಾಗಿದೆ. ನಾನು ಕ್ಲಾಸ್ಗೆ ಥರ್ಡ್" ಎಂದೆ. ನಮ್ಮಮ್ಮ ಟ್ಯೂಶನ್ ಮಧ್ಯದಲ್ಲಿಯೇ "ವೇರಿ ಗುಡ್" ಎಂದರು. ನಾನು ಕೂಗಿದ್ದು ಕೇಳಿ ನಮ್ಮ ತಂದೆಯವರಿಗೂ ಎಚ್ಚರವಾಯಿತು, ಅವರು ಏಳುತ್ತಲೆ - "ಭಲೇ ಮಗನೇ, ತುಂಬಾ ಒಳ್ಳೆಯ ಸುದ್ದಿ ತಂದಿರುವೆ. ಎಲ್ಲಿ, ಕೊಡು ಆ ಮಾರ್ಕ್ಸ್ ಕಾರ್ಡ್ನ್ನು ನೋಡೋಣ" ಅಂದು ನನ್ನ ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡ್ ನೋಡುತ್ತಾ ಪಕ್ಕದಲ್ಲೇ ಇದ್ದ ತಮ್ಮ ಕನ್ನಡಕವನ್ನು ಹಾಕಿಕೊಂಡರು. ನಾನು ಏದುಸಿರಿನ ಉತ್ಸಾಹದಿಂದ ಮಾರ್ಕ್ಸ್ ಕಾರ್ಡ್ನ್ನು ಅವರ ಕೈಗಿತ್ತೆ. ನಮ್ಮಮ್ಮ ಟ್ಯೂಶನ್ ಹೇಳುವುದನ್ನು ಬಿಟ್ಟು ನನ್ನ ಹಾಗು ನನ್ನ ತಂದೆಯವರ ಕಡೆಗೆ ನೋಡುತ್ತಿದ್ದರು. ತುಂಬಾ ಸಂತೋಷದಿಂದ ಕೈಗೆತ್ತಿಕೊಂಡಿದ್ದ ನಮ್ಮ ತಂದೆಯವರ ಮುಖದಲ್ಲಿ ಆ ಮಾರ್ಕ್ಸ್ ಕಾರ್ಡ್ನ್ನು ನೋಡಿದ ಕೂಡಲೇ ಒಂದು ರೀತಿಯ ನಿರಾಶೆ ಮೂಡಿತು. ತಮ್ಮ ಕನ್ನಡಕವನ್ನು ತೆಗೆಯುತ್ತಾ, ಮಾರ್ಕ್ಸ್ ಕಾರ್ಡ್ನ್ನು ನನಗೆ ಮರಳಿಸಿ "ಅಯ್ಯೋ ಹುಚ್ಚಪ್ಪಾ, ಇದು ಕ್ಲಾಸ್ಗೆ ಥರ್ಡ್ ಅಲ್ಲ ಮಗನೇ, ಥರ್ಡ್ ಕ್ಲಾಸ್" ಎಂದರು. ನಾನು ಆ ಮಾರ್ಕ್ಸ್ ಕಾರ್ಡ್ನ್ನು ಮತ್ತೆ ನೊಡಿದೆ. ಹೌದು, ಅದರಲ್ಲಿ ಹಾಗೆಯೇ ಇತ್ತು: "ಕ್ಲಾಸ್" - "III" ಎಂದು ಬರೆದಿತ್ತು. "ಥರ್ಡ್ ಕ್ಲಾಸ್" ಅಂದರೆ ನನಗೆ ಗೊತ್ತಿತ್ತು, ಆದರೆ ಅದನ್ನು ಮಾರ್ಕ್ಸ್ ಕಾರ್ಡ್ಲ್ಲಿ ಈ ರೀತಿಯಾಗಿ ಬರೆಯುತ್ತಾರೆ ಎಂದು ಗೊತ್ತಿರಲಿಲ್ಲ. ನಮ್ಮಮ್ಮನ ಕಡೆಗೆ ನೋಡಿದೆ- ಅವರು ಆಗಲೇ ಟ್ಯೂಶನ್ ಮುಂದುವರೆಸಿದ್ದರು. ಸಾಯಂಕಾಲವಾಗಿತ್ತು, ಆಟದ ಸಮಯ. ಆ ಮಾರ್ಕ್ಸ್ ಕಾರ್ಡ್ನ್ನು ಅಲ್ಲಿಯೇ ಇಟ್ಟು ಆಟವಾಡಲು ಹೋದೆ.
"ಈ ಕೋರ್ಸ್ನಲ್ಲಿ ನನಗೆ ಆಸಕ್ತಿಯಲ್ಲ, ಸುಮ್ಮನೇ ಯಾಕೇ ಅವರಿವರಿಗಾಗಿ ನಾನು ಇದನ್ನು ಮಾಡಬೇಕು?" - ಆ ರಾತ್ರಿ ನನಗೆ ಜ್ಞಾನೋದಯವಾಯಿತು. ನಾನು ದ್ವೀತಿಯ, ತೃತಿಯ ಮಾಡೋ ಅವಶ್ಯಕತೆ ಇಲ್ಲ, ನಾನು ಮಾಡೋದು ಇಲ್ಲ ಎಂದೂ ನಿರ್ಧರಿಸಿ, ಕಣ್ಣು ಮುಚ್ಚಿದೆ.
Monday, March 29, 2010
Subscribe to:
Post Comments (Atom)
6 comments:
ha ha ha Thirdclas :)...chennagide
Paapa magu :)
Nan friend obba, 3rd class bandidru class ge 3rd bandidda, so it is possible :-)... good article kiran...
chennagittu kiran .....5 nimisha olle time pass aaythu..keep writing...:)
Funny one..
Article matra third class illa sir.. First Class agi ide.. :)
Post a Comment