Wednesday, April 6, 2011

ನೀವಿರದೇ

ಎಂಚಿನ ಸಾವು,
ಪವನೇಶ್ ಮಾರಾಯರೇ!

ಈ ವಿಧಿಯ, ಆ ಸೂತ್ರಧಾರಿಗೆ
ಮೊದಲು ಎರಡು ಮಾತು:
"HNY" ಮತ್ತು "ಅವನಜ್ಜಿ ಟೊಯ್"!

ಈ ವಿಧಿಯ, ಈ ಪಾತ್ರಧಾರಿಗೆ ಎರಡು ನುಡಿ:
ಆ ನಿಮ್ಮ ನಗೆ, ಹುಸಿ ನಗೆ, ಮುಗುಳ್ ನಗೆ
ಇಲ್ಲದ ನಿಮ್ಮ ವೃತ್ತಿಯ
ಚತುರ್-ಭಿತ್ತಿಯ,
ಬಿಕೋ ಎನ್ನುವಾ
ಮೂಖ ವೇದನೆ - ವಿರಹ ಸಂವೇದನೆ
ಕೇಳಲಾಗದೇ, ನೋಡಲಾಗದೇ
ಆ ಕಡೆಯ ಪಯಣಕ್ಕೆ
ಕೆಲದಿನಗಳ ತಡೆ ಒಡ್ಡಿರುವೆ!

ಈ ವಿರಾಮಕ್ಕೆ ವಿಷಾದವಿದೆ :(

ಏಳೀ, ಏದ್ದೇಳಿ
ಬೇಗನೇ ಗುಣ ಹೊಂದಿ,
ನಮ್ಮೊಂದಿಗೆ ಅನುದಿನ, ಅನುಕ್ಷಣ
ಬೆರೆತು,ಮರೆತು
ಮತ್ತೆ ಬೇಗನೇ ಮೊದಲಿನಂತಾಗಿ.

ಈ ವಿಧಿಯ, ಆ ಸೂತ್ರಧಾರಿಗೆ
ಕೊನೆಗೊಂದು ಪ್ರಾರ್ಥನೆ:
ರಸಿಕ ಭೋಜನ,
ರಮ್ಯ ನೋಟಗಳ ಛಾಯಚಿತ್ರಿಕರಣ,
ಉಲ್ಲಾಸದ ಕ್ರಿಕೆಟ್, ಶಿಖರಾಹೋಣ
ರಂಜನೆಯ ಕಾವ್ಯ-ನಾಟ್ಯ ,
ಸಂಗೀತ-ಸಾಹಿತ್ಯದ
ನಿಮ್ಮ ಕಲಾ-ಕರ್ಮಭೂಮಿ,
ನೀವಿಲ್ಲದ ಕಲೆ
ಬಲುದಿನ ನೋಡದಿರಲಿ,
ನಿಮ್ಮ ಓಡನಾಟದ
ನಿರಂತರ ನೆಲೆ,
ಬಲು ಬೇಗನೆ ಕಾಣಲಿ.

*"ನೀವಿಲ್ಲದ ಕಲೆ" ಸಾಲಿನಲ್ಲಿ ಕಲೆ = dark spot
* ಚತುರ್-ಭಿತ್ತಿ = 4 walls = cubicle

No comments: